ಕಚೇರಿಯಲ್ಲೆ ಚಾಕು ಇರಿತಕ್ಕೊಳಗಾಗಿದ್ದ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯವರನ್ನು ಮಾಜಿ ಪ್ರಧಾನಿ ದೇವೇಗೌಡ ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ರು.
ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೊಕಾಯುಕ್ತರನ್ನು ನಿನ್ನೆ ಐಸಿಯು ನಿಂದ ವಾರ್ಡ್ ಗೆ ವರ್ಗಾಯಿಸಲಾಗಿತ್ತು. ಈ ಹಿನ್ನಲೆಯಲ್ಲಿ ಮಲ್ಉಯ ಆಸ್ಪತ್ರೆಗೆ ಭೇಟಿ ನೀಡಿದ್ದ ದೇವೇಗೌಡರು ಲೋಕಾಯುಕ್ತರ ಆರೋಗ್ಯ ವಿಚಾರಿಸಿದರು.
ವಿಶ್ವನಾಥ ಶೆಟ್ಟಿಯವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಗಳೊಂದಿಗೆ ಮಾತನಾಡಿದ ದೇವೆಗೌಡ್ರು, ಈಗ ರಾಜ್ಯದಲ್ಲಿ ಗೃಹ ಮಂತ್ರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಹಾಗಾಗಿಯೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದ್ರು.
ಅಲ್ಲದೆ ಹಿಂದೆಂದೆಯೂ ಈ ರೀತಿಯಾದ ಘಟನೆ ನಡೆದಿರಲಿಲ್ಲ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರಿಂದ ಲೋಕಾಯುಕ್ತರು ಉಳಿದಿದ್ದಾರೆ ಇಲ್ಲವಾದ್ರೆ ನಾವು ಅವರನ್ನು ಕಳೆದುಕೊಳ್ಳಬೇಕಾಗಿತ್ತು ಎಂದ್ರು. ಇದೆ ವೇಳೆ ಮಲ್ಯ ಆಸ್ಪತ್ರೆ ವೈದ್ಯ ದಿವಾಕರ್ ಭಟ್ ಮಾತನಾಡಿ ವಿಶ್ವನಾಥ್ ಶೇಟ್ಟಿ ಆರೋಗ್ಯ ಸುಧಾರಿಸಿದ್ದು ವಾರ್ಡ್ ಗೆ ಶಿಪ್ಟ್ ಮಾಡಲಾಗಿದೆ, ನಾಳೆ ಇನ್ನೊಮ್ಮೆ ಅವರನ್ನು ಪರೀಕ್ಷಿಸಿ ಡಿಸ್ಚಾರ್ಜ್ ಮಾಡಲಾಗುವುದು ಆದರೆ ಅವರಿಗೆ ಇನ್ನು ಒಂದು ತಿಂಗಳ ವಿಶ್ರಾಂತಿ ಅಗತ್ಯ ಎಂದ್ರು ಸದ್ಯ ಸಿಸಿಬಿ ಅಧಿಕಾರಿಗಳು ಸಹ ಲೋಕಾಯುಕ್ತರ ಹೇಳಿಕೆ ದಾಖಲಿಸಿಕೊಂಡಿದ್ದು ನಾಳೆ ಬಹುತೇಕ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದರು.