ಸರ್ಕಾರ ಮನಸ್ಸು ಮಾಡಿದ್ದರೇ ಗಲಭೆ ತಡೆಯಬಹುದಿತ್ತು- ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ

ರಾಜ್ಯ ಸರ್ಕಾರ ಹೊನ್ನಾವರ ಘಟನೆ ನಿರ್ವಹಿಸುವಲ್ಲಿ ವಿಫಲವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ದತ್ತಪೀಠ ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರನ್ನು ಬಿಎಸ್​ವೈ ಪಕ್ಕದಲ್ಲಿದ್ದುಕೊಂಡೇ ಬಂಧಿಸಲು ಸೂಚನೆ ನೀಡಿದ್ದೆ.

ಸರ್ಕಾರ ಮನಸ್ಸು ಮಾಡಿದ್ದರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುಗಲಭೆ ತಡೆಯಬಹುದಿತ್ತು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಭವನದಲ್ಲಿ ಕುಮಾರಸ್ವಾಮಿ ಹೇಳಿಕೆ ಮಂಗಳೂರಿನಲ್ಲಿ ಈಗ ಕಾಂಗ್ರೆಸ್ ನವರು ಸೌಹಾರ್ದ ಮೆರವಣಿಗೆ ಮಾಡ್ತಿದ್ದಾರೆ. ಮೊದಲೇ ಮಾಡೋದಕ್ಕೆ ಏನಾಗಿತ್ತು. ಗಲಾಟೆ ಆಗದಂತೆ ಪೊಲೀಸ್ ಫೋರ್ಸ್ ಹಾಕಲು ಏನಾಗಿತ್ತು.ಒಂದು ವಾರ ಸಿಎಂ ಗೆ ಉಸಿರೇ ಇರಲಿಲ್ಲ. ಈಗ ಜನರು ಶಾಂತವಾಗಿರಿ ಎಂದು ಹೇಳುತ್ತಿದ್ದಾರೆಎರಡೂ ರಾಷ್ಟ್ರೀಯ ಪಕ್ಷಗಳು ಈ ವಿಷಯದ ಮೇಲೆ ಚುನಾವಣೆ ಮಾಡಲು ಹೊರಟಿವೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ಹಲವಾರು ಭ್ರಷ್ಟಾಚಾರ ನಡೆದಿದ್ದು, ಮೈಸೂರು ಮಿನರಲ್ಸ್​ನಲ್ಲಿ ನಡೆದ ಅವ್ಯೆವಹಾರವನ್ನು ಸಧ್ಯದಲ್ಲೇ ಬಯಲುಮಾಡುತ್ತೇನೆ. ಜೆಡಿಎಸ್ ನ 8 ಜನ ಕಾರ್ಯಕರ್ತರು ಹತ್ಯೆಗೀಡಾದ್ರು. ನಾವೇನು ಬೆಂಕಿ ಹಚ್ಚಿ ಗಲಾಟೆ ಮಾಡಿಲ್ಲ. ಸರ್ಕಾರ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.