ಜನ್ಮದಿನ ಸಮಾರಂಭದಲ್ಲೂ ರೈತರ ನೆನಪು : ಎಚ್ ಡಿ ಕುಮಾರಸ್ವಾಮಿಗೆ ಶುಭಾಶಯಗಳ ಮಹಾಪೂರ —-

ಜೆಡಿಎಸ್​ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ ಇವತ್ತು 59ನೇ ಹುಟ್ಟುಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಡುತ್ತಿರುವ ದಳಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಜನ್ಮದಿನ ಸಮಾರಂಭದಲ್ಲೂ ರೈತರಿಗೆ ಉಪಯುಕ್ತ ಉಡುಗೊರೆ ನೀಡುವ ಮೂಲಕ ಎಚ್ ಡಿ ಕೆ ಸಾರ್ಥಕತೆ ಮೆರೆದ್ರು.

ad


ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮಧ್ಯರಾತ್ರಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ್ರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಕೂಡಾ ಎಚ್ ಡಿ‌ಕೆಗೆ ಶುಭಾಶಯ ಕೋರಿದ್ದಾರೆ. ಕುಮಾರಸ್ವಾಮಿಯವರಿಗೆ ಆರೋಗ್ಯ-ಆಯುಷ್ಯವನ್ನ ದೇವರು ಕರುಣಿಸಿ, ಇನ್ನಷ್ಟು ಜನಸಾಮಾನ್ಯರ ಸೇವೆ ಮಾಡುವ ಅವಕಾಶವನ್ನು ಒದಗಿಸಲಿ ಎಂದು ಆಶೀರ್ವದಿಸಿದ್ದಾರೆ.

 ಇನ್ನು ಸ್ಯಾಂಡಲ್​ವುಡ್​ ಅಭಿನವ ಚಕ್ರವರ್ತಿ, ಕಿಚ್ಚ ಸುದೀಪ್ ಕೂಡ ಕುಮಾರಸ್ವಾಮಿಗೆ ಶುಭಾಷಯ ಕೋರಿದ್ರು.ಶೇಷಾದ್ರಿಪರಂ ನಲ್ಲಿರುವ ಜೆಪಿ ಭವನದಲ್ಲೂ ಹೆಚ್ ಡಿ ಕುಮಾರಸ್ವಾಮಿ ಜನ್ಮದಿನವನ್ನು ಆಚರಿಸಲಾಯ್ತು. ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಪ್ರಾಯೋಜಕತ್ವದ ಅಪ್ಪಾಜಿ ಕ್ಯಾಂಟೀನ್ ಅನ್ನು ಜೆಪಿ ಭವನದಲ್ಲಿ ಇದೇ ಸಂಧರ್ಭದಲ್ಲಿ ಉದ್ಘಾಟಿಸಲಾಯ್ತು. ನಂತರ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಐದು ಹೋಬಳಿಗೊಂದು ರಾಗಿ ಒಕ್ಕಣೆ ಮಾಡುವ ಯತ್ನವನ್ನು ಹೆಚ್’ಡಿಕೆ ರೈತರಿಗೆ ಉಡುಗೊರೆಯಾಗಿ ನೀಡಿದರು.