“ಸಿ.ಎಮ್. ಇರುವ ವೇದಿಕೆಯಲ್ಲಿ ಪುತ್ರ ಸೂರಜ್ ಗೂ ಸೀಟು” – ಸರ್ಕಾರಿ ಕಾರ್ಯಕ್ರಮದಲ್ಲಿ ರೇವಣ್ಣ ದರ್ಬಾರ್

ಲೋಕೋಪಯೋಗಿ ಸಚಿವ ಹೆಚ್​.ಡಿ.ರೇವಣ್ಣ ಅವ್ರ ದರ್ಬಾರ್​​ ಮುಂದುವರೆದಿದೆ. ಹಾಸನದಲ್ಲಿ ಸಿಎಂ ಪಾಲ್ಗೊಂಡಿದ್ದ ವೇದಿಕೆಯಲ್ಲೇ ತಮ್ಮ ಪುತ್ರ ಸೂರಜ್​​ಗೆ ರೇವಣ್ಣ ಅವಕಾಶ ಮಾಡಿಕೊಟ್ಟಿದ್ದಾರೆ. ಚುನಾಯಿತ ಪ್ರತಿನಿಧಿ ಅಲ್ಲದೇ ಇದ್ದರೂ ಪುತ್ರ ಸೂರಜ್​​ಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಹಾಸನದಲ್ಲಿ ಹಮ್ಮಿಕೊಂಡಿದ್ದ ರೈತರ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಡಿಸಿ, ಐಜಿಪಿ, ಎಸ್​ಪಿ, ಶಾಸಕರು, ಎಂಎಲ್​ಸಿಗಳು ಇದ್ದ ಸಾಲಿನಲ್ಲೇ ಸೂರಜ್​​ರನ್ನು ರೇವಣ್ಣ ಕೂರಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ವ್ಯಕ್ತಿಗಳನ್ನು ಕೂರಿಸುವಂತಿಲ್ಲ. ಕೆಲವೆಡೆ ಎಂಎಲ್​​ಎ, ಎಂಎಲ್​ಸಿಗಳನ್ನೇ ಅಧಿಕೃತ ಕಾರ್ಯಕ್ರಮಕ್ಕೆ ಆಹ್ವಾನಿಸಲ್ಲ. ಶಿಷ್ಟಾಚಾರ ಗಟ್ಟಿ ಇರುವಾಗ ಖಾಸಗಿ ವ್ಯಕ್ತಿ, ಅದ್ರಲ್ಲೂ ಕುಟುಂಬದ ವ್ಯಕ್ತಿ ಕೂರಿಸಿದ್ದು ಸರೀನಾ ಅನ್ನೋ ಪ್ರಶ್ನೆ ಕೇಳಿ ಬರ್ತಿದೆ.

“ದಕ್ಷ, ಪ್ರಾಮಾಣಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯಾರು ಬೇಕಾದರೂ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕೂರಬಹುದಾ? ಇದೇನು ಕುಟುಂಬದ ಕಾರ್ಯಕ್ರಮವೋ..ಸರ್ಕಾರಿ ಕಾರ್ಯಕ್ರಮವೋ..?” ಎಂದು ಜನ ಕೇಳ್ತಿದ್ದಾರೆ.