ಕಾಂಗ್ರೆಸ್ಸಿಗರೇ ಮುಖ್ಯಮಂತ್ರಿ ಆಗಲಿ ಎಂದಿದ್ದ ಎಚ್ ಡಿ ದೇವೇಗೌಡ !!

 

ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಬೇಡ. ಕಾಂಗ್ರೆಸ್ಸಿಗರಲ್ಲೇ ಯಾರಾದರೂ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಲಹೆ ನೀಡಿದ್ದರಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು.ಹೌದು. ಚುನಾವಣಾ ಫಲಿತಾಂಶ ಪ್ರಕಟವಾದಾಗ ಹೆಚ್ಚಿನ ಸ್ಥಾನ ಹೊಂದಿರುವ ಕಾಂಗ್ರೆಸ್ಸಿಗರೇ ಮುಖ್ಯಮಂತ್ರಿಯಾಗಲಿ ಎಂದಿದ್ದೆ. ಆದರೆ ಕಾಂಗ್ರೆಸ್ಸಿಗರ ಸೇರಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದರು ಎಂದು ಇಂದು ತಮ್ಮ ನಿವಾಸದಲ್ಲಿ ಎಚ್ ಡಿ ದೇವೇಗೌಡರು ಹೇಳಿದ್ದಾರೆ.ಪದ್ಮನಾಭನಗದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಎಚ್ ಡಿ ದೇವೇಗೌಡ, “ಕುಮಾರಸ್ವಾಮಿ ದೆಹಲಿಗೆ ಹೋಗಿದ್ದಾರೆ. ರಾಹುಲ್ ಗಾಂಧಿ ಕುಮಾರಸ್ವಾಮಿ ಅವ್ರನ್ನ ಕರೆದಿಲ್ಲ. ಸೃಷ್ಟಿ ಮಾಡಿ ಸುದ್ದಿ ಮಾಡಬಾರದು. ಸುಳ್ಳು ಸುದ್ದಿ ನನಗೆ ನೋವಾಗಿದೆ‌. ಕುಮಾರಸ್ವಾಮಿ ಪ್ರಧಾನಿ ಹಾಗೂ ಕೇಂದ್ರ ಮಂತ್ರಿಗಳನ್ನ ಭೇಟಿ ಆಗಿ ಬರ್ತಾರೆ. ಕಲ್ಲಿದ್ದಲು ಕಡಿಮೆ ಇರೋದ್ರೀಂದ ಸಪ್ಲೈ ಮಾಡಲು ಮನವಿ‌ ಮಾಡ್ತಾರೆ” ಎಂದರು.

 

ಕಾಂಗ್ರೆಸ್ ಮರ್ಜಿಯಲ್ಲಿ ಇದ್ದೇನೆ ಅನ್ನೋ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಸನ್ನಿವೇಶದ ಶಿಶು. ಅವರು ಹೇಳ್ತಿರೋದು ನಿಜ. ನನಗೂ ಅ ನೋವಿದೆ‌ ಎಂದರು.ಯಡಿಯೂರಪ್ಪ ಸದನದಲ್ಲಿ ಭಾಷಣ ವಿಚಾರ ಪ್ರಸ್ತಾಪಿಸಿದ ಎಚ್ ಡಿಡಿ, ಇತಿಹಾಸದಲ್ಲಿ ಅಂತಹ ಕೆಳಮಟ್ಟದ ಭಾಷೆ ಬಳಕೆ‌ ಮಾಡಿದ್ದು ನಾನು ನೋಡಿಲ್ಲ ಎಂದರು.ಬಂದ್ ಬೇಕಾದ್ರೆ ಮಾಡಿಕೊಳ್ಳಲಿ. ಆರೂವರೆ ಕೋಟಿ ಜನ ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. 38 ಜನ ಇಟ್ಟುಕೊಂಡು ನಾವು ಹೇಗೆ ಸಾಲಮನ್ನ ನಿರ್ಧಾರ ಮಾಡೋಕೆ ಆಗುತ್ತೆ ? ಕುಮಾರಸ್ವಾಮಿ ಅದನ್ನೆ ಹೇಳಿದ್ದಾರೆ. ಸಿಎಂ‌ ನೀವೆ ಆಗಿ ಅಂತ ಕಾಂಗ್ರೆಸ್ ಅವ್ರಿಗೆ ನಾವೇ ಹೇಳಿದ್ವಿ. ಆದ್ರೆ ಕಾಂಗ್ರೆಸ್ ಅವ್ರೇ ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಹೇಳಿದ್ರು ಎಂದು ದೇವೇಗೌಡ ಹೇಳಿದರು.