ಲೂಟಿ ಹೊಡೆಯುವ ಅಧಿಕಾರಿಗಳೇ ಇವರಿಗೆ ಬೇಕು..!! ಹೆಚ್​ಡಿಕೆ ವಾಗ್ದಾಳಿ..

ಮುಖ್ಯಕಾರ್ಯದರ್ಶಿಗೆ ಐಪಿಎಸ್​ ಅಧಿಕಾರಿಗಳ ಪತ್ರ ವಿಚಾರ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ರು. ತುಮಕೂರಿನ ತಿಪಟೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿರಂತರವಾಗಿ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ.

ad


 

ಡೀಲ್ ಮಾಡಿಕೊಡುವ ಅಧಿಕಾರಿಗಳನ್ನ ರಕ್ಷಿಸುವುದು ಹೇಗೆ ಅಂತಾ ಸಿಎಂಗೆ ಗೊತ್ತಿದೆ. ನಿಷ್ಠಾವಂತ ಅಧಿಕಾರಿಗಳು ಇವರಿಗೆ ಬೇಕಿಲ್ಲ, ಲೂಟಿ ಹೊಡೆಯುವವರು ಬೇಕು. ಎಂದು ಸಿಎಂ ವಿರುದ್ಧ ಎಚ್​ಡಿ ಕುಮಾರ ಸ್ವಾಮಿ ಕಿಡಿಕಾರಿದ್ರು.