ನನ್ನ ಮಗನ ಎದುರು ನಿಲ್ಲಿಸಲು ಬಿಜೆಪಿಗೆ ಬೇರೆ ಯಾರು ಸಿಗಲಿಲ್ಲವೇ? ಎ.ಮಂಜು ವಿರುದ್ಧ ಎಚ್​​.ಡಿ.ರೇವಣ್ಣ ಲೇವಡಿ !!

ಮೊದಲ ಹಂತದ ಮತದಾನಕ್ಕೆ ದಿನಗಣನೆ ನಡೆಯುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸುಗೊಂಡಿದೆ. ಆರೋಪ ಪ್ರತ್ಯಾರೋಪದ ಸುರಿಮಳೆ ಆರಂಭವಾಗಿದ್ದು, ಮತದಾರ ಪ್ರಭುವಿನ ಗಮನ ಸೆಳೆಯಲು ಇನ್ನಿಲ್ಲದ ಸರ್ಕಸ್ ಆರಂಭವಾಗಿದೆ. ಹೀಗಿರುವಾಗಲೇ ತಮ್ಮ ಪುತ್ರನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಚಿವ ಎ.ಮಂಜು ವಿರುದ್ಧ ಸಚಿವ ರೇವಣ್ಣ ಕಿಡಿಕಾರಿದ್ದಾರೆ.

ಹಾಸನದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ,  ಬಿಜೆಪಿಯವರಿಗೆ ನನ್ನ ಪುತ್ರನ ಎದುರು ನಿಲ್ಲಿಸಲು ಬೇರೆ ಯಾವುದೇ ಕ್ಯಾಂಡಿಡೇಟ್​ ಸಿಗಲಿಲ್ಲವೇ?  ಒಮ್ಮೆ ಪಕ್ಷಕ್ಕೆ ಮೋಸ ಮಾಡಿ ಹೋದವರನ್ನೇ ಪುನಃಕರೆದು ಅಭ್ಯರ್ಥಿಯಾಗಿ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಅಲ್ಲದೇ ಹಾಸನದಲ್ಲಿ ನನ್ನ ಪುತ್ರನ ವಿರುದ್ಧ ಯಾರೇ ಕ್ಯಾಂಡಿಡೇಟ್​ ಆದರೂ ನಮಗೆ ಚಿಂತೆಯಿಲ್ಲ. ನಾವು ಗೆಲ್ಲುತ್ತೇವೆ. ಆ ವಿಶ್ವಾಸ ನಮಗಿದೆ ಎಂದರು. ಒಟ್ಟಿನಲ್ಲಿ ಚುನಾವಣೆ ಆರಂಭದಿಂದಲೂ ಎ.ಮಂಜು ವಿರುದ್ಧ ಕಿಡಿಕಾರುತ್ತಲೇ ಬಂದಿದ್ದ ರೇವಣ್ಣ ಇನ್ನು ತಮ್ಮ ವಾಗ್ದಾಳಿ ಮುಂದುವರೆಸಿದ್ದು, ಹಾಸನದಲ್ಲಿ ಏನಾಗುತ್ತೆ ಯಾರು ಗೆಲ್ಲುತ್ತಾರೆ ಕಾದು ನೋಡಬೇಕಿದೆ.