ಇವರು ಹೆಲಿಕಾಪ್ಟರ್ ನಲ್ಲಿ ಬಂದು ನಾಮಿನೇಶನ್ ಮಾಡಿದ್ರು. ದಂಗಾದ್ರು ಆ ಭಾಗದ ಜನ.. ಯಾವ ಪಕ್ಷ? ಯಾರವರು? ಈ ಸುದ್ದಿ ನೋಡಿ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾದ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹೆಲಿಕಾಪ್ಟರ್​ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ರು. ಥೇಟ್ ಅದೇ ರೀತಿ ವಿದ್ಯಾರ್ಥಿ ಸಂಘಟನೆ ಯುವ ಮುಖಂಡ ವಿನಯ್ ರಾಜಾವತ್ ಸಹ ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಆಗಮಿಸಿ ಇವತ್ತು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ad

ಹಲವಾರು ಹೋರಾಟಗಳಲ್ಲಿ ಗುರುಸಿಕೊಂಡಿರುವ ವಿನಯ್ ರಾಜಾವಾತ್ ಶಿಕಾರಿಪುರದಿಂದ ಬಿಎಸ್​ವೈ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಿದ್ದಾರೆ. ಈತ ಸಹ್ಯಾದ್ರಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾನೆ. ಬಣಜಾರ ಸಮುದಾಯ ಹೆಚ್ಚಿರುವ ಶಿಕಾರಿಪುರದಲ್ಲಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ತೆಲುಗು ಸೈಲ್​ನಲ್ಲಿ ಹೆಲಿಕಾಪ್ಟರ್​ ಮೂಲಕ ಬಂದು ಬಿಎಸ್​ವೈ ಕ್ಷೇತ್ರದಲ್ಲಿಯೇ ಹೊಸ ಹವಾವನ್ನ ಈ ಪೋರ ಕ್ರಿಯೇಟ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ಯಡಿಯೂರಪ್ಪನವರು ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ, ಮೆರವಣಿಗೆ ಮಾಡಿದ್ರು.. ಈತ ಥೇಟ್ ಅದೇ ರೀತಿ ಪಾದಯಾತ್ರೆ ನಡೆಸಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.