ಈತ ಬಾಗಲಕೋಟೆಯ ಬಲಭೀಮ- ಬೆನ್ನ ಮೇಲೆ ಹೊರ್ತಾನೆ ಬರೋಬ್ಬರಿ ೧೨೦ ಕೆಜಿ!

ಸಾಮಾನ್ಯವಾಗಿ ಹತ್ತು ಕೆಜಿ ಭಾರವಾದ ವಸ್ತು ತೆಗೆದುಕೊಂಡು ಹೋಗೋದೇ ಕಷ್ಟ. ಅಂತಹದರಲ್ಲಿ 120 ಕಿಲೋ ಭಾರವಾದ ವಸ್ತು ಬೆನ್ನು ಮೇಲೆ ಹಾಕಿಕೊಂಡು ನಡೆಯುವುದು ಅಂದರೆ ಎಂತಹವರಿಗೂ ಆಶ್ಚರ್ಯ ಆಗುತ್ತದೆ. ಇಂತಹ ವ್ಯಕ್ತಿಯೊರ್ವರು ಬಾಗಲಕೋಟೆಯಲ್ಲಿದ್ದು, ಬರೋಬ್ಬರಿ 120 ಕೆಜಿ ಭಾರವನ್ನು ವಸ್ತು ತಮ್ಮ ಬೆನ್ನಿನ ಮೇಲೆ ಇಟ್ಟುಕೊಂಡು ನಡೆಯುವ ಮೂಲಕ ಈ ವ್ಯಕ್ತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

adಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ರಾಂಪುರ ಗ್ರಾಮದ ನಿವಾಸಿ ಹೀಗೆ ಭಾರದ ವಸ್ತುವನ್ನು ಬೆನ್ನ ಮೇಲೆ ಹೊತ್ತು ನಡೆದಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ರಾಂಪುರ ಶ್ರೀಹನುಮಂತ ದೇವರ ಓಕಳಿ ಮತ್ತು ಲಕ್ಕವ್ವ ತಾಯಿ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಹೀಗೆ ಸಾಹಸಮಯ ಕಸರತ್ತು ನಡೆಸಿದ್ದು, ಎಲ್ಲರ ಗಮನ ಸೆಳೆಯಿತು.

 

ಮೂರು ದಿನಗಳು ನಡೆಯುವ ಕಾರ್ಯಕ್ರಮ ಇದರಲ್ಲಿ ಸಾಕಷ್ಟು ಗ್ರಾಮೀಣ ಕ್ರೀಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಅದರಲ್ಲಿ ವಿಶೇಷವಾಗಿ ಸುಮಾರು ವರ್ಷಗಳಿಂದ ಕುಸ್ತಿ ಪಟುವಾಗಿರುವ ವಿಠ್ಠಲ, ನಾನಾ ರೀತಿಯ ಕಸರತ್ತನ್ನು ಮಾಡಿ ನೀಲಕಂಠೇಶ್ವರ ಮಠದಿಂದ ಲಕ್ಕವ್ವ ತಾಯಿ ಗುಡಿವರೆಗೂ 120 ಕೆಜಿ ಜೋಳದ ಚೀಲವನ್ನು ಹೊತ್ತುಕೊಂಡು ಹೋಗಿ ಮತ್ತಷ್ಟು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ವಿಠ್ಠಲ ಹುಚ್ಚಪಾ ತಳವಾರ ಮಾತನಾಡಿ ಸುಮಾರು ವರ್ಷಗಳಿಂದ ನಾನು ಕುಸ್ತಿ ಆಡುತ್ತಾ ಬಂದಿದ್ದೇನೆ ಹಾಗಾಗಿ ಇಂತಹ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ನನಗೆ ಸಂತಸ ತಂದಿದೆ ಅದೇ ರೀತಿ ಇನ್ನೂ ಸಾಕಷ್ಟು ಕ್ರೀಡಾಪಟುಗಳಿಗೆ ಇದು ಮಾದರಿ ಆಗಲಿ ಅನ್ನೋದು ನನ್ನ ಆಸೆ ಎಂದು ಹೇಳಿದರು.

V