Heavy Rain Falls in Bangalore | 10 Trees Fall down around City | ಸಿಲಿಕಾನ್​ ಸಿಟಿಯಲ್ಲಿ ರಾತ್ರಿ ಐದಾರು ಗಂಟೆ ಜೋರಾದ ಗಾಳಿ ಸಹಿತ ವರುಣ ಅಬ್ಬರಿಸಿದ್ದಾನೆ.

0
9

ಸಿಲಿಕಾನ್​ ಸಿಟಿಯಲ್ಲಿ ರಾತ್ರಿ ಐದಾರು ಗಂಟೆ ಜೋರಾದ ಗಾಳಿ ಸಹಿತ ವರುಣ ಅಬ್ಬರಿಸಿದ್ದಾನೆ.  ತಾವರೆಕೆರೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಮಳೆರಾಯನ ಅಬ್ಬರಕ್ಕೆ ನಗರದಾದ್ಯಂತ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ರಾಮಮೂರ್ತಿ ನಗರ ಸಮೀಪದ ಕಲ್ಕೆರೆ ಗ್ರಾಮದಲ್ಲಿ ರಮೇಶ್‌ ಎಂಬುವರ ಮನೆ ಮೇಲೆ ಅರಳಿ ಮರ ಉರುಳಿ ಬಿದ್ದಿದೆ. ಮರ ಬಿದ್ದ ಸ್ಥಳಗಳಿಗೆ ಬಿಬಿಎಂಪಿ ಸಿಬ್ಬಂದಿ ಭೇಟಿ ನೀಡಿ  ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮರಗಳ ತೆರವುಮಾಡ್ತಿದ್ದಾರೆ. ಕೆಲವೆಡೆ ವಿದ್ಯುತ್‌ ಕಂಬಗಳು ಉರುಳಿಬಿದ್ದಿದ್ದರಿಂದ, ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ, ಬೆಸ್ಕಾಂ ಸಹಾಯವಾಣಿಗೆ 3,715 ದೂರುಗಳು ಬಂದಿದ್ದವು. ದೂರು ಸ್ವಿಕರಿಸಲಾಗದೆ ಬೆಸ್ಕಾಂ ಸಹಾಯವಾಣಿಯನ್ನ ಬಂದ್​ ಮಾಡಲಾಗಿತ್ತು. ಇನ್ನು, ಮುತ್ಸಂದ್ರದಲ್ಲಿ ಮಳೆ ಸುರಿದ ವೇಳೆ ಜೋರಾಗಿ ಬೀಸಿದ ಗಾಳಿಗೆ ಹತ್ತು ಮನೆಗಳು ಹಾನಿಯಾಗಿವೆ. ರಾತ್ರಿ ರಸ್ತೆಯಲ್ಲೆಲ್ಲಾ ನಿರು ತುಂಬಿ ಹಾಗು ಕೆಲವೆಡೆ ಮರ ಬಿದ್ದದ್ದರಂತೆ ವಾಹನ ಸವಾರರು ಪರಾದಾಡಿದ್ರು. ಇನ್ನು, ಬೆಂಗಳೂರಿಗೆ ರಾತ್ರಿ ದಾಖಲೆ ಮಳೆಯಾಗಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here