ರಣಮಳೆಗೆ ಉತ್ತರಭಾರತ ತತ್ತರ! ವರುಣನ ರೌದ್ರಾವತಾರಕ್ಕೆ 30 ಬಲಿ!!

ಚುನಾವಣೆಯ ಸಿದ್ಧತೆಯಲ್ಲಿದ್ದ ಉತ್ತರ ಭಾರತಕ್ಕೆ ವರುಣ ಸಖತ್​ ಶಾಕ್​ ನೀಡಿದ್ದಾನೆ. ಉತ್ತರಭಾರತದ ಹಲವು ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಅಕಾಲಿಕವಾಗಿ ಬಾರಿ ಮಳೆ ಸುರಿಯುತ್ತಿದೆ. ರೌದ್ರಾವತಾರ ತಾಳಿರುವ ಮಳೆ  30ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ad

ಗುಜರಾತ್ ಮತ್ತು ಸೌರಾಷ್ಟ್ರ, ರಾಜಸ್ಥಾನ ಪ್ರಾಂತ್ಯದಲ್ಲಿ ಕಳೆದ 2 ದಿನಗಳಿಂದ ಬಿಡದೇ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಗುಡುಗು ಮತ್ತು ಮಿಂಚಿನಿಂದಾಗಿ ಹತ್ತಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈಗಾಗಲೇ ಧೂಳು ಸಹಿತ ಚಂಡಮಾರುತದ ಭಾರಿ ಅವಾಂತರವನ್ನು ಸೃಷ್ಟಿ ಮಾಡಿರುವ ಮಳೆ ಜನರಲ್ಲಿ ಬಾರಿ ಆತಂಕವನ್ನು ಮೂಡಿಸಿದೆ.

ವರದಿಗಳ ಪ್ರಕಾರ ಇದುವರೆಗೂ ಮಳೆಗೆ ಗುಜರಾತ್​​ನಲ್ಲಿ ನಿನ್ನೆ 11 ಮಂದಿ ಮೃತಪಟ್ಟಿದ್ದು, ರಾಜಸ್ಥಾನದಲ್ಲಿ 6 ಮಂದಿ ಹಾಗೂ ಮಧ್ಯಪ್ರದೇಶದಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೂ ಹಲವರು ಗಾಯಗೊಂಡಿದ್ದಾರೆ. ಹಾಗೆಯೇ ಹಲವಾರು ಮಂದಿ ನಾಪತ್ತೆಯೂ ಸಹ ಆಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಜಿಬಿ ಮಂಗ್ಲಪಾರಾ ಹೇಳಿದ್ದಾರೆ.

ಮಳೆಯಿಂದಾಗಿ ಸಾವಿಗೀಡಾದ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ಥರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಿದ್ದಾರೆ. ಅದರಂತೆ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 2 ಲಕ್ಷ ರೂ ಹಾಗು ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ.ಮಳೆಯಿಂದಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಹಿನ್ನಡೆಯಾಗಿದ್ದು, ಚುನಾವಣಾ  ಕಾರ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.