ಇತ್ತ ದಾವಣಗೆರೆ ಜಿಲ್ಲೆಯಲ್ಲೂ ಇಡೀ ರಾತ್ರಿ ಮಳೆರಾಯ ಅಬ್ಬರಿಸಿದ್ದಾನೆ. ಶೇಖರಪ್ಪ ಬಡಾವಣೆ , ಎಸ್ ಪಿ ಎಸ್ ನಗರ ಸೇರಿ ಹಲವು ಬಡಾವಣೆಗಳಲ್ಲಿ ಮಳೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಇದ್ರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಅದ್ರಲ್ಲೂ ಪ್ರಾದೇಶಿಕ ಅಗ್ನಿಶಾಮಕ ಕಚೇರಿ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಪೀಠೋಪಕರಣಗಳೂ ನೀರಿನಲ್ಲಿ ಮುಳುಗಿವೆ. ಹೀಗಾಗಿ ಕಡತಗಳನ್ನು ನೆನೆಯದಂತೆ ಕಾಪಾಡಲು ಅಗ್ನಿ ಶಾಮಕ ಸಿಬ್ಬಂದಿ ಪರದಾಡಿದ್ರು. ಕಚೇರಿ ಆವರಣ ಸಂಪೂರ್ಣ ಕೆರೆಯಂತಾಗಿದೆ.
====
ಇನ್ನು ಒಳಚರಂಡಿಗೆ ತೆಗೆದಿದ್ದ ಆಳುದ್ದದ ಗುಂಡಿಗಳಿಗೆ ದ್ವಿಚಕ್ರವಾಹನಗಳೇ ಕೊಚ್ಚಿ ಹೋಗಿವೆ. ಕಳೆದ ರಾತ್ರಿ ದಾವಣಗೆರೆ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here