ಒಂದೆಡೆ ಧಾರಾಕಾರ ಮಳೆ, ಇನ್ನೊಂದೆಡೆ ಮಳೆಗಾಗಿ ತಪಸ್ಸು

ಕರಾವಳಿ, ಮಲೆನಾಡು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಮಳೆ ಇಲ್ಲದೇ ರೈತರು ಕಂಗಾಲಾಗುತ್ತಿರುವುದನ್ನು ಕಂಡ ಇಲ್ಲೊಬ್ಬ ಮಹಿಳೆ, ಮಳೆಗಾಗಿ ತಪಸ್ಸು ಕುಳಿತಿದ್ದಾಳೆ.

ad


ಹೌದು..ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದ ಹುಲಿಗೆಮ್ಮ ಎಂಬ ಮಹಿಳೆ ತಾಲೂಕಿನ ಬಿಕನಳ್ಳಿ ಗ್ರಾಮದ ಬಳೀ ಊಟ ನೀರು ಬಿಟ್ಟು ಮೌನ ಅನುಷ್ಠಾನಕ್ಕೆ ಕುಳಿತಿದ್ದಾಳೆ.ಕಳೆದ ಒಂದುವರೆ ತಿಂಗಳಿಂದ ಮಳೆ ಇಲ್ಲದೇ ಈ ಭಾಗದ ರೈತರು ದೇವರ ಮೊರೆಹೋಗಿದ್ದು ಪ್ರತಿ ಗ್ರಾಮದಲ್ಲಿ ಮಳೆಗಾಗಿ ಪೂಜೆ ಪುನಸ್ಕಾರ ನಡೆಯುತ್ತಲೆ ಇವೆ,ಹುಲಿಗೆಮ್ಮ ಮಹಿಳೆ ಕೂಡ ಮಳೆಗಾಗಿ ಪದಹಾಡುವ ಕಾಯಕದಲ್ಲಿ ತೊಡಗಿದ್ದಳು,ಎಂದಿನಂತೆ ಬಿಕನಳ್ಳಿ ಗ್ರಾಮದಲ್ಲಿ ಮಳೆ ಪದ ಹಾಡಿ ಗ್ರಾಮಕ್ಕೆ ಮರಳುವ ಸಂದರ್ಭದಲ್ಲಿ ಏಕಾ ಏಕಿ ಗ್ರಾಮದ ಹಳ್ಳದ ಪಕ್ಕದಲ್ಲಿ ಅನುಷ್ಠಾನಕ್ಕೆ ಕುಳಿತು,ನನಗೆ ದೇವರ ವಾಣಿಯಾಗಿದೆ.

ಮಳೆ ಬರುವವರೆಗೂ ನಾನು ಇಲ್ಲೆ ಕೂಡುವೆ,5 ದಿನದಲ್ಲಿ ಮಳೆಯಾಗುತ್ತೆ ಎಂದು ಕಳೆದ ದಿನ ಬೆಳಿಗ್ಗೆ 5 ಗಂಟೆಯಿಂದ ಒಂದು ತೊಟ್ಟು ನೀರು ಅಹಾರ ಸೇವಿಸದೇ ಮೌನ ಅನುಷ್ಠಾನಕ್ಕೆ ಕುಳಿತಿದ್ದಾಳೆ. ಇನ್ನು ಈ ಹುಲಿಗೆಮ್ಮ ಕಳೆದ ಎರಡು ವರ್ಷದ ಹಿಂದೇ ಇದೇ ರೀತಿ ಮಳೆ ಕೈಕೊಟ್ಟಾಗ,ಮೈನಳ್ಳಿ ಗ್ರಾಮದಲ್ಲಿ ದ್ಯಾವಮ್ಮ ದೇವಿಗೆಕೋಣ ಬಿಡಿ ಎಂದು ಹೇಳಿದಾಗ ಗ್ರಾಮಸ್ಥರು ಕೋಣ ಬಿಟ್ಟ ಬೆನ್ನಲ್ಲೆ ಮಳೆ ಸುರಿದಿತಂತೆ ಮತ್ತು ಕಳೆದ ವರ್ಷ ಕೂಡ ಹಿರೆ ಸಿಂದೋಗಿ ಗ್ರಾಮದ ಮರಳಸಿದ್ದೇಶ್ವರ ದೇವಸ್ಥಾನದಲ್ಲಿ ಅನಿಷ್ಠಾನಕ್ಕೆ ಕುಳಿತು ದೇವರನ್ನು ಹೊಳೆ ಪೂಜೆ ಮಾಡಿಸಿ ತನ್ನಿ ಮಳೆಯಾಗುತ್ತೆ ಎಂದು ಹೇಳಿದ್ದಳಂತೆ ಆಗಲೂ ಕೂಡ ಮಳೆ ಸುರಿದಿತ್ತು.

ಈಗ ಕೂಡ ಬಿಕನಳ್ಳಿ ಗ್ರಾಮದಲ್ಲಿ ಬಂದು ಅನುಷ್ಠಾನಕ್ಕೆ ಕುಳಿತಿದ್ದು, ಈ ಭಾರಿಯೂ ಕೂಡ ಮಳೆಯಾಗುತ್ತೆ ಎಂದು ನಂಬಿದ ಸುತ್ತಮುತ್ತಲಿನ ಗ್ರಾಮಸ್ಥರು,ಅನುಷ್ಠಾನಕ್ಕೆ ಕುಳಿತ ಸ್ಥಳಕ್ಕೆ ಬಂದು ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ, ನಿರಂತರವಾಗಿ ಮಹಿಳೆಯರಿಂದ ಮಳೆ ಪದ ಹಾಗೂ ಭಜನೆ ನಿರಂತರ ನಡೆಸಿಕೊಂಡು ಬರುತ್ತಿದ್ದಾರೆ ಗ್ರಾಮಸ್ಥರು.