ಪೆಟ್ರೋಲ್, ಡೀಸೆಲ್ ದರ ಏರಿಕೆ : ಗ್ರಾಹಕನ ಜೇಬಿಗೆ ಮತ್ತೆ ಕತ್ತರಿ

ಪೆಟ್ರೋಲ್‌ ಮತ್ತು ಡೀಸೆಲ್‌ ಬಳಸುವ ಗ್ರಾಹಕನ ಜೇಬಿಗೆ ಮತ್ತೊಮ್ಮೆ ಕತ್ತರಿ . ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 7 ಪೈಸೆ ಜಾಸ್ತಿಯಾಗಿದ್ದು, ಡೀಸೆಲ್‌ಗೆ 10-11 ಪೈಸೆಯಷ್ಟು ಏರಿಕೆಯಾಗಿದೆ.

 

ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 07 ಪೈಸೆ ಹೆಚ್ಚಾಗಿ 74.64 ರೂ. ಹಾಗೂ ಡೀಸೆಲ್‌ ಬೆಲೆಯಲ್ಲಿ 10 ಪೈಸೆ ಏರಿಕೆಯಾಗಿದ್ದು, 69.88 ರೂ.ಗೆ ಮಾರಾಟವಾಗುತ್ತಿದೆ. ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್‌ಗೆ 07 ಪೈಸೆ ಏರಿಕೆಯಾಗುವ ಮೂಲಕ 72.24 ರೂ ಮತ್ತು ಡೀಸೆಲ್‌ 10 ಪೈಸೆ ಏರಿಕೆಯಾಗಿ 67.54 ರೂ.ಗಳಿಗೆ ಮಾರಾಟವಾಗುತ್ತಿದೆ. ಇದು 80ರ ಗಡಿ ದಾಟುವ ಮುನ್ಸೂಚನೆಯಿದೆ ಎಂದು ಹೇಳಲಾಗಿದೆ. ಇನ್ನು ಮುಂಬೈನಲ್ಲಿ ಲೀ. ಪೆಟ್ರೋಲ್‌ 77.87 ರೂಗೆ ಮಾರಾಟವಾಗುತ್ತಿದ್ದು, 07 ಪೈಸೆ ಜಾಸ್ತಿಯಾಗಿದೆ ಇನ್ನು ಡೀಸೆಲ್‌ ಲೀ.ಗೆ 10 ಪೈಸೆ ಏರಿಕೆಯಾಗಿ 70.86 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಲೀ.ಪೆಟ್ರೋಲ್‌ಗೆ 07 ಪೈಸೆ ಏರಿಕೆಯಾಗಿ 75.02 ರೂ ಮತ್ತು ಲೀಟರ್‌ ಡೀಸೆಲ್‌ಗೆ 11 ಪೈಸೆ ಹೆಚ್ಚಾಗಿದ್ದು 71.49 ರೂ.ಗೆ ಮಾರಟವಾಗುತ್ತಿದೆ. ಹೀಗೆ ಕೋಲ್ಕತಾದಲ್ಲಿಯೂ 07 ಪೈಸೆ ಪೆಟ್ರೋಲ್‌ಗೆ ಏರಿಕೆಯಾಗುದ್ದು 74.33 ರೂ ಲೀಟರ್‌ ಡೀಸೆಲ್‌ಗೆ 10 ಪೈಸೆ ಏರಿಕೆಯಾಗಿದ್ದು 69.33 ರೂ.ಗಳಿಗೆ ಮಾರಾಟವಾಗುತ್ತಿದೆ.