ಉಪಚುನಾವಣೆ ಕಣಕ್ಕೆ ಸಿ.ಎಸ್ ಶಿವಳ್ಳಿ ಪತ್ನಿ! ಕುಸುಮಾ ಶಿವಳ್ಳಿಗೆ ಟಿಕೆಟ್​ ನೀಡಲು ನಿರ್ಧರಿಸಿದ ಕೈಹೈಕಮಾಂಡ್​​!!

ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಮುನ್ನವೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ಲೋಕಸಭಾ ಚುನಾವಣೆಯ ನಂತರ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿ ಪ್ರಾರಂಭವಾಗಲಿದೆ.ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುಂದಗೋಳದ ಕ್ಷೇತ್ರದಲ್ಲಿ ಹಿಂದೆ ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ ಪತ್ನಿ ಕುಸುಮಾಗೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಕೊಡಲು ಕಾಂಗ್ರೆಸ್ ನಾಯಕರು ನಿರ್ಧಾರಿಸಿದ್ದಾರೆ.

ad

ಪೌರಾಡಳಿತ ಸಚಿವ ಹಾಗೂ ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ. 19 ರಂದು ಚುನಾವಣೆ ನಿಗದಿಯಾಗಿದೆ. ಮೇ. 23 ರಂದು ಲೋಕಸಭಾ ಚುನಾವಣಾ ಫಲಿತಾಂಶದ ದಿನವೇ ಉಪ ಚುನಾವಣಾ ಫಲಿತಾಂಶವೂ ಪ್ರಕಟವಾಗಲಿದೆ.
ಕೆಲವು ದಿನಗಳ ಹಿಂದೆ ಮಾರ್ಚ್​ 22 ರಂದು ಸಚಿವ ಶಿವಳ್ಳಿ ನಿಧನರಾಗಿದ್ದರು. 6 ತಿಂಗಳಿನ ಒಳಗೆ ಲೋಕಸಭಾ ಚುನಾವಣೆಯ ನಂತರ ವಿಧಾನ ಸಭಾ ಉಪ ಚುನಾವಣೆ ಬರಬಹುದು ಎಂಬ ನೀರಿಕ್ಷೆಯಲ್ಲಿದ್ದರು. ಹಾಗೆಯೇ ಲೋಕಸಭೆ ಚುನಾವಣೆಯ ಜೊತೆ ಜೊತೆಗೆ ಉಪ ಚುನಾವಣೆ ನಡೆಸಲು ನಿರ್ಧರಿಸಿರುವುದು ಟಿಕೆಟ್‌ ಆಕಾಂಕ್ಷಿಗಳಲ್ಲಿ ತಳಮಳವನ್ನುಂಟು ಮಾಡಿದೆ.

ಶಿವಳ್ಳಿ ಅವರ ನಿಧನದ ನಂತರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಶಿವಳ್ಳಿರವರ ಪತ್ನಿ ಕುಸುಮಾ ರವರು ಸ್ಪರ್ಧಿಸುತ್ತಾರೆ. ಎಂದು ಕೇಳಿಬರುತ್ತಿತ್ತು.ಈ ಹಿಂದೆ ಶಿವಳ್ಳಿಯವರ ಅಂತ್ಯಕ್ರಿಯೆಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದಾರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್‌ನ ಮುಖಂಡರು ಶಿವಳ್ಳಿ ಕುಟುಂಬವನ್ನು ಕಾಂಗ್ರೆಸ್‌ ಕೈಬಿಡುವುದಿಲ್ಲ ಎಂದಿದ್ದರು. ಇದು ಪರೋಕ್ಷವಾಗಿ ಕುಸುಮಾ ಅವರನ್ನು ಕಣಕ್ಕೆ ಇಳಿಸುವುದೇ ಈ ಮಾತಿನ ಹಿಂದಿನ ಉದ್ದೇಶ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು.

ಒಂದು ವೇಳೆ ಕುಸುಮಾರವರು ಆಸಕ್ತಿ ತೋರಿದರೆ, ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಪಕ್ಕಾ ಎಂದೇ ಹೇಳಲಾಗುತ್ತಿತ್ತು.ಇಲ್ಲದಿದ್ದರೆ ಕಾಂಗ್ರೆಸ್‌ ಹೊಸಬರ ಹುಡುಕಾಟ ನಡೆಸಬೇಕಾಗುತ್ತದೆ. ಎಂದಿದ್ದರು ಅಲ್ಲದೆ ಅಲ್ಲದೆ ಚುನಾವಣೆ ಸ್ಪರ್ಧೆ ಕುರಿತು ಈಗಾಗಲೇ ಆಸಕ್ತಿ ಹೊಂದಿರುವ ಶಿವಳ್ಳಿಯವರ ಸಹೋದರ ಷಣ್ಮುಖ ಶಿವಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುರೇಶಗೌಡ ಪಾಟೀಲರು, ಪಕ್ಷ ಅವಕಾಶ ಮಾಡಿಕೊಟ್ಟರೆ, ತಾವು ಸ್ಪರ್ಧೆಗೆ ಸಿದ್ಧ ಎನ್ನುವ ಮಾತನ್ನು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ವಿನಯ ಕುಲಕರ್ಣಿ ಸಹೋದರ ವಿಜಯ್‌ ಕುಲಕರ್ಣಿ ಕೂಡಾ ಪಕ್ಷವು ನಿರ್ಧರಿಸಿದರೆ, ಅಭ್ಯರ್ಥಿ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಆದರೆ ಸದ್ಯ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ದಿನೇಶ್, ಪರಮೇಶ್ವರ್, ಡಿಕೆಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುಂದಗೋಳ ಸಿ.ಎಸ್ ಶಿವಳ್ಳಿ ಪತ್ನಿ ಕುಸುಮಾಗೆ ಟಿಕೆಟ್ ನೀಡಲು ನಿರ್ಧಾರಿಸಿದ್ದಾರೆ. ಕುಸುಮಾರನ್ನು ಆಯ್ಕೆಮಾಡಿರುವ ಕಾಂಗ್ರೆಸ್ ಕುಸುಮರವರು ಅನುಕಂಪದ ಅಲೆಯ ಮೂಲಕ ಗೆಲ್ಲುಬಹುದು ಎಂಬ ಹಲವು ಲೆಕ್ಕಾಚಾರಗಳನ್ನು ಮಾಡುವ ಮೂಲಕ ಆಯ್ಕೆಮಾಡಲಾಗಿದೆ ಎಂದು ಕೇಳಿಬರುತ್ತಿದೆ.