ಕರ್ನಾಟಕದ ರಜಿನಿಕಾಂತ್​ ಅಭಿಮಾನಿಗಳಿಗೆ ಸಿಹಿಸುದ್ದಿ- ಪೊಲೀಸ್ ಭದ್ರತೆಯಲ್ಲಿ ಚಿತ್ರಪ್ರದರ್ಶನಕ್ಕೆ ಹೈಕೋರ್ಟ್​​ ಆದೇಶ!

 

ad


ರಜನಿಕಾಂತ್ ಚಿತ್ರಪ್ರೇಮಿಗಳಿಗೆ ಹೈಕೋರ್ಟ್​​ ಒಂದು ಸಿಹಿಸುದ್ದಿ ನೀಡಿದೆ. ಹೌದು ಸೂಪರ್ ಸ್ಟಾರ್ ರಜಿನಿ ಕಾಂತ್​ ರ ಬಹುನಿರೀಕ್ಷಿತ ಚಿತ್ರ ಕಾಲಾ ಚಿತ್ರ ಕೊನೆಗೂ ರಾಜ್ಯದಲ್ಲಿ ರಿಲೀಸ್ ಆಗ್ತಿದ್ದು, ಚಿತ್ರ ಬಿಡುಗಡೆಗೆ ಬೇಕಾದ ಸೂಕ್ತ ಭದ್ರತೆ ನೀಡುವಂತೆ ಡಿಐಜಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಹೈ ಕೋರ್ಟ್ ಸೂಚನೆ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂದಪಟ್ಟಂತೆ ರಜಿನಿಕಾಂತ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕರವೇ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ಚಿತ್ರ ಬಿಡುಗಡೆಗೆ ನಿಷೇಧ ಹೇರಿದ್ದವು. ಈ ಸಂಬಂಧ ಕನ್ನಡಪರ ಸಂಘಟನೆ ಮುಖ್ಯಸ್ಥರು ಹೇಳಿಕೆ ನೀಡಿದ್ದರು. ಇದಕ್ಕೆ ಖುದ್ದು ರಜಿನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಅಳಿಯ ಧನುಷ್ ನಿನ್ನೆ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಇಂದು ಪ್ರಕರಣದ ವಿಚಾರಣೆಯನ್ನು ಕೈಗೆ ಎತ್ತಿಕೊಂಡ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ಏಕ ಸದಸ್ಯ ಪೀಠ ಚಿತ್ರ ಬಿಡುಗಡೆಗೆ ಪೊಲೀಸ್ ಭಧ್ರತೆ ನೀಡಲು ಸೂಚನೆ ನೀಡಿದೆ.

 

ಈಗಾಗಲೇ ಚಲನ ಚಿತ್ರ ಬಿಡುಗಡೆ ಸಂಬಂಧಿಸಿದಂತೆ ಪದ್ಮಾವತ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಆದೇಶವಿದೆ. ಆದ್ರೂ ಸಹ ಕಾಲಾ ಚಿತ್ರ ಬಿಡುಗಡೆಗೆ ನಿಷೇಧ ಹೇರಲಾಗುತ್ತಿದೆ ಎಂದು ಕಾಲಾ ಚಿತ್ರತಂಡದ ಪರ ವಕೀಲ ದ್ಯಾನ್ ಚಿನ್ನಪ್ಪ ವಾದ ಮಂಡಿಸಿದ್ರು. ಇದಕ್ಕೆ ನ್ಯಾಯಮೂರ್ತಿಗಳು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ರ ನ್ಯಾಯಾಂಗ ನಿಂದನೆ ಉಲ್ಲಂಘಿಸಿದಿವರು ಅನುಭವಿಸುತ್ತಾರೆ ಬಿಡಿ ಎಂದ್ರು. ಚಲನಚಿತ್ರ ಪ್ರದರ್ಶನ ಮಾಡುವಂತೆ ಯಾರನ್ನ ಬಲವಂತ ಪಡಿಸುವಂತಿಲ್ಲ. ಆದರೆ ಬಿಡುಗಡೆಗೆ ಅದಕ್ಕೆ ಭದ್ರತೆ ನೀಡುವುದನ್ನು ಪರಿಗಣಿಸಬಹುದು. ಆದರೆ ನೀವು ಅನಗತ್ಯವಾಗಿ ಭಯ ಪಡುತ್ತಿರುವಂತೆ ಕಾಣುತ್ತಿದೆ ಎಂದರು. ಅಲ್ಲದೇ ಭದ್ರತೆ, ಕಾನೂನು ಸುವ್ಯವಸ್ಥೆ ಸರ್ಕಾರದ ಹೊಣೆ ಅದರಲ್ಲಿ ವಿಫಲವಾದ್ರೆ ಕೋರ್ಟ್ಗೆ ಬನ್ನಿ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ರು. ಈ ಬಗ್ಗೆ ಸಂಘಟನೆಗಳಿಂದ ಬೆದರಿ ಇದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಹೇಳಿದ್ರು. ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರಾದ ಎಎಜಿ ಶಿವಣ್ಣ ಚಿತ್ರತಂಡ ಪೊಲೀಸ್ರಿಗೆ ಮನವಿ ಸಲ್ಲಿಸಿದ್ರೆ ಪರಿಶೀಲನೆ ಮಾಡುವುದಾಗಿ ಹೇಳಿದ್ರು.