ಕೆಪಿಎಸ್ಸಿ 2011 ನೇಮಕಾತಿ ರದ್ದು- ಅಭ್ಯರ್ಥಿಗಳಿಗೆ ಹೈಕೋರ್ಟ್​ನಲ್ಲಿ ಹಿನ್ನಡೆ!!

2011 ರ ಕೆಪಿಎಸ್ ಸಿ ನೇಮಕಾತಿಯನ್ನು ರದ್ದುಗೊಳಿಸಿ ಹೈ ಕೊರ್ಟ್ ವಿಭಾಗೀಯ ಪೀಠ ಮಹತ್ವದ ಅದೇಶ ನೀಡಿದೆ.

ad


ಡಾ.ರೇಣುಕಾಂಬಿಕ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಪುರಸ್ಕರಿಸಿದ ವಿಭಾಗಿಯ ಪೀಟ ಈ ಮಹತ್ವದ ಅದೇಶವನ್ನು ನೀಡಿದೆ. ಆ ಮೂಲಕ 2011 ರಲ್ಲಿ ಪರೀಕ್ಷೆ ಪಾಸಾಗಿದ್ದ 362 ಅಭ್ಯರ್ಥಿಗಳಿಗೆ ಬಹು ದೊಡ್ಡ ಹಿನ್ನಡೆಯಾಗಿದೆ. ಏನಿದು 2011 ಕೆಪಿಎಸ್ ಸಿ ನೇಮಕಾತಿ ವಿವಾದ? ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 362 ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದ ಆಯ್ಕೆ ಪಟ್ಟಿಯನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಿತ್ತು.

ಸರ್ಕಾರದ ಕ್ರಮವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮುಂದೆ ಪ್ರಶ್ನಿಸಲಾಗಿತ್ತು. ವಿವಾದದ ಹಿನ್ನಲೆ 2011 ರಲ್ಲಿ ನಡೆದ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎನ್ನುವ ಆರೋಪದಲ್ಲಿ ಪ್ರಕರಣವನ್ನು ಸರ್ಕಾರ ಸಿಐಡಿ ಗೆ ವಹಿಸಿತ್ತು. ಪ್ರಕರಣವನ್ನು ಕೂಲಂಕುಷವಾಗಿ ತನಿಕೆ ಮಾಡಿದ್ದ ಸಿಐಡಿ ನೇಮಾಕತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರಿದಿ ನೀಡಿತ್ತು. ಈ ವರದಿಯನ್ನು ಪುರಸ್ಕರಿಸಿದ್ದ ಸರ್ಕಾರ ಸಂಪುಟ ಸಭೆಯಲ್ಲಿ ನೇಮಾಕತಿಯನ್ನು ರದ್ದು ಮಾಡು ನಿರ್ಧಾರ ತೆಗೆದುಕೊಂಡಿತ್ತು.