ನಿಖಿಲ್ ರಾಜಕೀಯ ಭವಿಷ್ಯದ ತಳಮಳ : ದೇವರಿಗೆ ಪೂಜೆ, ಜ್ಯೋತಿಷಿಗಳ ಭೇಟಿ

ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್​ ಮನೆಗೆ ಭೇಟಿ ನೀಡಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗ ನಿಖಿಲ್​ ಕುಮಾರಸ್ವಾಮಿ ಜೊತೆಗೆ ಆರ್​.ಟಿ ನಗರದಲ್ಲಿರುವ ಜ್ಯೋತಿಷಿ ದ್ವಾರಕನಾಥ್ ನಿವಾಸಕ್ಕೆ ಭೇಟಿ ಮಾಡಿದ ಹೆಚ್​ಡಿಕೆ ಸುಮಾರು ಹೊತ್ತು ಚರ್ಚೆ ಮಾಡಿದರು. ಚುನಾವಣೆ ಹೊತ್ತಿನಲ್ಲಿ ಸಿಎಂ ಹಾಗೂ ನಿಖಿಲ್​ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಜ್ಯೋತಿಷಿ ರಾಜಗುರು ದ್ವಾರಕನಾಥ್​, ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಆಶಿರ್ವಾದ ಪಡೆಯಲು ಬಂದಿದ್ರು ಅಂತ ಹೇಳಿದ್ರು. ಕುಮಾರಸ್ವಾಮಿ ಅವರು ಕಳೆದ ವಾರವೇ ಬರಬೇಕಾಗಿತ್ತು. ಅವರು ಶೃಂಗೇರಿಗೆ ಹೋಗಿದ್ದರಿಂದ ಬರಲು ಆಗಿರಲಿಲ್ಲ. ವಂಶ ಪಾರಂಪರ್ಯ ರಾಜಕಾರಣ ಒಂದು ಕಡೆ ಇರಲಿ,  ಯಾರ್ ಯಾರಿಗೆ ಯೋಗ ಇರುತ್ತೊ ಅವರು ಅನುಭವಿಸುತ್ತಾರೆ. ಆ ಹುಡುಗ ಚುನಾವಣೆಗೆ ನಿಲ್ಲಬೇಕು ಎಂಬ ಉತ್ಸಾಹದಲ್ಲಿದ್ದಾನೆ. ಒಬ್ಬ ಗುರುವಾಗಿ ನಮ್ಮ ಮನೆಗೆ ಯಾರೇ ಬಂದರೂ ಧೈರ್ಯ ತುಂಬಿ ಕಳಿಸುತ್ತೇನೆ, ಅದು ನನ್ನ ಕರ್ತವ್ಯ. ನಿನಗೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ, ಅವರಿಗೆ ಶಾರದಾ ಪೀಠದ ಪೂರ್ಣಾನುಗ್ರಹ ಇದೆ. ಕುಮಾರಸ್ವಾಮಿ ಅವರಿಗೆ ಕಂಟಕ ಬಂದಾಗ ಗಾಣಕಪುರಕ್ಕೆ ಹೋಗಿ ಸೇವೆ ಮಾಡಿ ಎಂದು ಹೇಳಿದೆ.ಅಲ್ಲಿ ಹೋಗಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಈಗ ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದೇನೆ ಎಂದು ದ್ವಾರಕನಾಥ್ ಗುರೂಜಿ ಹೇಳಿದ್ದಾರೆ.