ಸಿಲಿಕಾನ್ ಸಿಟಿಯಲ್ಲಿ ಹೈಟೈಕ್​ ಸರಗಳ್ಳರು! ಕಾರಿನಲ್ಲಿ ಬಂದವರು ಮಾಡಿದ್ದೇನು ಗೊತ್ತಾ?!

ಕಳೆದ ಎರಡು- ಮೂರು ವರ್ಷಗಳಿಂದ ಸಿಲಿಕಾನ ಸಿಟಿಯ ಜನರಿಗೆ ಹಾಗೂ ಪೊಲೀಸರಿಗೆ ತಲೆನೋವಾಗಿದ್ದ ಬೆಂಗಳೂರಿನ ಸರಗಳ್ಳರು ಇದೀಗ ಮತ್ತಷ್ಟು ಹೈಟೈಕ್​ ಆಗಿ ಫಿಲ್ಡ್​ಗಿಳಿದಿದ್ದಾರೆ. ಹೌದು ಇಷ್ಟು ವರ್ಷಗಳಿಂದ ಬ್ಲ್ಯಾಕ್​ ಪಲ್ಸರ್​​ ಬೈಕ್​ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಕಳ್ಳರು ಇದೀಗ ಕಾರಿನಲ್ಲಿ ಬಂದು ಸರಗಳ್ಳತನ ಆರಂಭಿಸಿದ್ದಾರೆ.

ad

ಬೆಂಗಳೂರಿನ ಬನಶಂಕರಿಯಲ್ಲಿ ಇಂತಹದೊಂದು ವಿಲಕ್ಷಣ ಘಟನೆ ನಡೆದಿದೆ. ಅನಿಲ್​ ಎಂಬುವವರು ಅವರ ಪತ್ನಿಯೊಂದಿಗೆ ವಾಕಿಂಗ್​ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಕಳ್ಳರು ಅನಿಲ್ ಪತ್ನಿಯ 1.20 ಲಕ್ಷ ರೂಪಾಯಿ ಬೆಲೆಬಾಳುವ ಮಾಂಗಲ್ಯ ಸರ ಕದ್ದು ಎಸ್ಕೇಪ್​ ಆಗಿದ್ದಾರೆ.

ಈ ವೇಳೆ ಅನಿಲ್ ಹಾಗೂ ಅವರ ಪತ್ನಿ ಕಿರುಚಿಕೊಂಡಿದ್ದರಿಂದ ಸ್ಥಳದಲ್ಲಿದ್ದ ಕೆಲವರು ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಅನಿಲ್​ ಮುಖಕ್ಕೆ ಕಳ್ಳರು ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದಾರೆ. ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

https://www.facebook.com/btvnewslive/videos/371749743687482/