ದಯಾಮರಣಕ್ಕೆ ಸುಪ್ರಿಂ ಅಸ್ತು !! ಸಾವು ನಮ್ ಕೈಲಿಲ್ಲ ಎಂಬ ಗಾದೆ ಇನ್ನು ಅಪ್ರಸ್ತುತ !!

ಗೌರವದ ಸಾವು ಮನುಷ್ಯನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್​ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದೆ.

ನಿಷ್ಕ್ರಿಯ ಪ್ರಕರಣಗಳಲ್ಲಿ ದಯಾಮರಣಕ್ಕೆ ಪರ್ಮಿಷನ್​​ ನೀಡಿ ಸುಪ್ರೀಂಕೋರ್ಟ್​ನ ಪಂಚಪೀಠದಿಂದ ಮಹತ್ವದ ಆದೇಶ ನೀಡಿದೆ.ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಪಂಚ ಪೀಠ ಈ ಆದೇಶ ಹೊರಡಿಸಿದೆ. ಇನ್ನು ವೈದ್ಯಕೀಯ ಮಂಡಳಿಯಿಂದ ಅನುಮತಿ ಸಿಕ್ಕರೆ ಸ್ವಯಂ ಸಾವಿಗೆ ಅವಕಾಶ ನೀಡಲಾಗುತ್ತೆ. ಮನುಷ್ಯರಿಗೆ ಘನತೆಯಿಂದ ಪ್ರಾಣಬಿಡುವ ಹಕ್ಕು ಇದ್ದೇ ಇದೆ. ಮೆದುಳು ನಿಷ್ಕ್ರೀಯ, ಕೋಮು ಸ್ಥಿತಿಯಿಂದ ಹೊರಬರಲಾಗದವರು ಬದುಕುವುದು ಕಷ್ಟ.

ಅತ್ತ ಸಾಯಲೂ ಆಗದೆ, ಇತ್ತ ಬದುಕಲೂ ಆಗದೇ

ಒದ್ದಾಡುತ್ತಿದ್ದ ರೋಗಿಗಳಿಗೆ ಸ್ವ ಇಚ್ಚೆಯ ಮರಣ ಅವಕಾಶ ನೀಡಬಹುದು ಎಂದು ಕೋರ್ಟ್ ಹೇಳಿದೆ.ನಿಷ್ಕ್ರಿಯ ರೋಗಿಗಳ ಸಾವಿಗೆ ಅನುಮತಿ ನೀಡಿದ ಕೋರ್ಟ್​ ಕಟ್ಟುನಿಟ್ಟಿನ ಮಾರ್ಗಸೂಚಿ ರಚನೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಮೆದುಳು ನಿಷ್ಕ್ರಿಯ ಸ್ಥಿತಿ,ಕೋಮಾ ಸ್ಥಿತಿಯಲ್ಲಿದ್ದವರು ಬದುಕುವುದು ಕಷ್ಟ. ಇಂಥ ಗಂಭೀರ ಸಂದರ್ಭಗಳಲ್ಲಿ ಸ್ವಇಚ್ಛೆಯ ಸಾವಿಗೆ ಅನುಮತಿಗೆ ಆದೇಶ ಅನ್ವಯಿಸುತ್ತದೆ.