ಭಾರತದ ಕಳಪೆ ಬ್ಯಾಟಿಂಗ್. .

ಶ್ರೀಲಂಕಾ ವಿರುಧ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಭಾರತ ಹಾಗು ಶ್ರೀಲಂಕಾ ಇಂದು ಮತ್ತೆ ಮುಖಾಮುಖಿಯಾಗಿದೆ. 3 ಏಕದಿನ ಪಂದ್ಯದ ಸರಣಿ ಇಂದಿನಿಂದ ಆರಂಭವಾಗಿದೆ. ಈ ಹಿಂದೆ ಧರ್ಮಶಾಲಾ ಮೈದಾನದಲ್ಲಿ ನಡೆದ 3 ಏಕದಿನ ಪಂದ್ಯಗಳ ಪೈಕಿ ಟೀಮ್​ಇಂಡಿಯಾ 2ರಲ್ಲಿ ಜಯಸಾಧಿಸಿದೆ. ವಿರಾಟ್ ಕೊಹ್ಲಿ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ರೋಹಿತ್ ಶರ್ಮಾ ಟೀಮ್​ಇಂಡಿಯಾವನ್ನ ತಂಡವನ್ನು ಮುನ್ನಡೆಸಲಿದ್ದಾರೆ.

ad


ಮೊದಲು ಬ್ಯಾಟಿಂಗ್ ಮಾಡಿದ ಭಾರತ 38.2 ಓವರ್ ಗಳಲ್ಲಿ 112 ರನ್ ಗಳಿಗೆ ಸರ್ವ ಪತನಗೊಂಡಿದೆ. ಭಾರತದ ಪರ ಶಿಖರ ಧವನ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್ ಹಾಗೂ ಭೂಮ್ರಾ ಖಾತೆ ತೆರೆಯದೆ ಪೆವಿಲಿಯನ್ ಗೆ ವಪ್ಸ್ ಬಂದಿದ್ದಾರೆ. ಭಾರತದ ಪರ ಮಹೇಂದ್ರಸಿಂಗ್ ಧೋನಿಅತಿ ಹೆಚ್ಚು ಸ್ಕೋರ್ 65 ರನ್ ಹೊಡೆದು ಔಟಾದರು. ಶ್ರೀಲಂಕಾ ಪರ ಸುರಂಗಾ ಲಕ್ಮಲ್ ನಾಲ್ಕು ವಿಕೆಟ್ ಪಡೆದು ಯಶಸ್ವಿ ಬೌಲರ್ ಆದರು. ಅತಿ ಕಡಿಮೆ ಮೊತ್ತವಾದ 113 ರನ್ ಗಳನ್ನು ಲಂಕಾ ಹೇಗೆ ಎದಿರಿಸುತ್ತದೆ ಅಂತ ಕಾದು ನೋಡಬೇಕು