ಬೆಂಗಳೂರಲ್ಲಿ ಕಳ್ಳರು ಮತ್ತೆ ತಮ್ಮ ಕೈ ಚಳಕ ತೋರಿದ್ದಾರೆ. ಶ್ರೀನಗರದ ಪ್ರಶಾಂತ್ ಎಂಬುವರ ಮನೆಗೆ ಕನ್ನ ಹಾಕಿದ ಕಿರಾತರು ಬರೋಬ್ಬರಿ 2 ಕೆಜಿ ಚಿನ್ನ ದೋಚಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಬಂದ ಖತರ್ನಾಕ್ ಆಸಾಮಿಗಳು ಮನೆಯಲ್ಲಿ ಯಾರು ಇಲ್ಲದನ್ನು ಕಂಡು ಚಿನ್ನ ಹಾಗೂ ನಗದನ್ನು ದೋಚಿದ್ದಾರೆ. ಪ್ರಶಾಂತ್​ ಎಂಬುವರು ತಮ್ಮ ಸಂಬಂಧಿಯೊಬ್ಬರ ಮದ್ವೆಗೆ ಅಂತ ಚಿನ್ನ ಹಾಗೂ ನಗದನ್ನು ತಂದು ಮನೆಯಲ್ಲಿ ಇಟ್ಟಿದ್ದರು. ವೈಯಕ್ತಿಕ ಕಾರ್ಯದ ನಿಮ್ಮಿತ್ತ ಕುಟುಂಬಸ್ಥರೆಲ್ಲಾ ಊರಿಗೆ ತೆರಳಿದ್ದು ಈ ವೇಳೆ ಕೃತ್ಯ ನಡೆದಿದೆ. ಇನ್ನು, ವಿಷ್ಯ ತಿಳಿದ ತಕ್ಷಣವೇ ಹನುಮಂತನಗರ ಪೊಲೀಸರು ಸ್ಥಳಕ್ಕೆ ಶ್ವಾನ ದಳದ ಸಮೇತ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹನುಮಂತನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here