ಒಂಟಿ ಮನೆಗೆ ನುಗ್ಗಿ ದರೋಡೆ ಗೆ ಯತ್ನ, ಮ‌ನೆ ಮಾಲಿಕನಿಗೆ ಚಾಕು ಇರಿತ. ನಾಗರಿಕರೇ ಎಚ್ಚರ!!

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗುತ್ತಿದ್ದು, ದರೋಡೆ ನಡೆಸಲು ಒಂಟಿ‌ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲಿಕ ಹಾಗೂ ಆತನ ಮಗನಿಗರ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ರಾಮಸಾಗರದಲ್ಲಿ ಗ್ರಾಮದ ಹೊರಭಾಗದಲ್ಲಿರುವ ಡೈರಿ ನಾರಾಯಣರೆಡ್ಡಿ ಎಂಬುವರ ಮನೆಗೆ ರಾತ್ರಿ ಕಳೆದ ರಾತ್ರಿ ೮ ಗಂಟೆ ಸುಮಾರಿನಲ್ಲಿ ನುಗ್ಗಿದ ಐವರು ದರೋಡೆ ಕೋರರು ಮನೆ ಮಾಲಿಕ ಡೈರಿ ನಾರಾಯಣಸ್ವಾಮಿ ಹಾಗೂ ಮಗ ಚೇತನ್ ಇಬ್ಬರಿಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ. ‌

 

 

ಇವರ ಚೀರಾಟ ಕಂಡ ಸ್ಥಳಿಯರು ಸ್ಥಳಕ್ಕಾಗಮಿಸಿ ದರೋಡೆಗೆ ಬಂದಿದ್ದ ಒಬ್ಬ ವ್ಯಕ್ತಿಯನ್ನ ಹಿಡಿದು ಥಳಿಸಿದ್ದಾರೆ. ದರೋಡೆ ಕೋರರಿಂದ ಹಲ್ಲೆಗೊಳಗಾಗಿದ್ದ ತಂದೆ ಮಗ ಹಾಗೂ ದರೋಡೆಕೋರ ಮೂವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ‌ ದಾಖಲಿಸಲಾಗಿದೆ.  ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕಳೆದ ವಾರವಷ್ಟೆ ಇಂತಹ ಕೃತ್ಯ ಸಂಭವಿಸಿದ್ದು‌ ಇಂದು ಸಂಭವಿಸಿರುವ ಘಟನೆ ಆನೇಕಲ್ ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದ್ದು ಅದಷ್ಟು ಬೇಗನೆ ದರೋಡೆಕೋರರ ಕೈಗೆ ಪೊಲೀಸರು ಕೋಳ ತೊಡಿಸಿ ಜನರಿಗೆ ನೆಮ್ಮದಿ ಕಲ್ಪಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Avail Great Discounts on Amazon Today click here