ಸಾರ್ವಜನಿಕ ಪ್ರದೇಶದಲ್ಲಿ ಲಾಂಗ್​​ ಪ್ರದರ್ಶಿಸಿ ಕೌರ್ಯ ಮೆರೆದ ರೌಡಿಗಳು!!

https://youtu.be/y-4v1108Z74
https://youtu.be/y-4v1108Z74

ಇತ್ತೀಚಿಗೆ ರಾಜ್ಯದಲ್ಲಿ ರೌಡಿಗಳ ಅಟ್ಟಹಾಸ ಎಲ್ಲೇ ಮೀರಿದೆ. ಹೌದು ರೌಡಿಗಳು, ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಮುಲಾಜಿಲ್ಲದೇ ಹಾಡಹಗಲೇ ತಮ್ಮ ಅಪರಾಧ ಕೃತ್ಯ ನಡೆಸುತ್ತಿದ್ದು, ನಾಗರಿಕರು ಬೆಚ್ಚಿ ಬೀಳುವಂತಾಗಿದೆ.

ಇಂತಹುದೇ ಘಟನೆಯೊಂದು ಹಳೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ರಾತ್ರೋರಾತ್ರಿ ಕಿಡಿಗೇಡಿಗಳಿಬ್ಬರು ರಾಜಾರೋಷವಾಗಿ ತಲ್ವಾರ್​ ಹಿಡಿದು ಓಡಾಡುವ ಮೂಲಕ ಆತಂಕ ಸೃಷ್ಟಿಸಿದ್ದಾರೆ. ವಾಣಿಜ್ಯ ನಗರಿಯ ಆನಂದ್​ ನಗರದಲ್ಲಿ ರಾತ್ರೋರಾತ್ರಿ ಕಿಡಿಗೇಡಿ ಇಬ್ಬರು ಯುವಕರು ಪಲ್ಸರ್ ಬೈಕ್​ನಲ್ಲಿ ಬಂದು ತಲ್ವಾರ್ ಪ್ರದರ್ಶಿಸಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ. ಹೀಗೆ ಯುವಕರಿಬ್ಬರು ತಲ್ವಾರ್ ಹಿಡಿದು ಓಡಾಡಿರುವ ದೃಶ್ಯ ಬಿಟಿವಿಗೆ ಲಭ್ಯವಾಗಿದೆ. ಮೂಲಗಳ ಪ್ರಕಾರ ಯುವಕನೊಬ್ಬನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಯುವಕರು ತಲ್ವಾರ್ ಹಿಡಿದುಕೊಂಡು ಬಂದಿದ್ದು, ಆ ಯುವಕ ಸಿಗದ ಕಾರಣ ಬರಿಗೈಯಲ್ಲಿ ಪರಾರಿಯಾಗಿದ್ದರು ಎನ್ನಲಾಗಿದೆ.

 

 

ಇನ್ನು ಬಿಟಿವಿಯಲ್ಲಿ ಸುದ್ದಿ ಪ್ರಸಾರವಾದ ಕೆಲವೇ ಗಂಟೆಯಲ್ಲಿ ಪೊಲೀಸರು ತಲ್ವಾರ್ ಪ್ರದರ್ಶನ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ಜಾವೇದ್​ ಮೊಹಮ್ಮದ್​ ಗೌಸ್​ ಬಂಧಿತ ಆರೋಪಿ. ಈತ ಸ್ಥಳೀಯ ಪೊಲೀಸ್ ಠಾಣೆಯ ರೌಡಿಶೀಟರ್​ ಆಗಿದ್ದು, ಈತನ ಜೊತೆಗಿದ್ದ ಇನ್ನೊರ್ವ ಆರೋಪಿ ರಬ್ಬಾನಿ ಪರಾರಿಯಾಗಿದ್ದಾನೆ. ಇನ್ನು ಸ್ಥಳೀಯ ಪೊಲೀಸರು ಸಿಕ್ಕ ಮೊಬೈಲ್​ ಪೂಟೇಜ್​​​ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆದರೂ ವಾಣಿಜ್ಯ ನಗರಿಯ ಈ ರೌಡಿಗಳ ಅಟ್ಟಹಾಸ ಜನರನ್ನು ಬೆಚ್ಚಿಬೀಳಿಸಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here