ಕರುನಾಡಿಗೆ ಬರಲಿದೆ ಶಿವಸೇನೆ !! ಆರ್ ಎಸ್ ಎಸ್ ನಿಷೇದ ಚರ್ಚೆಯ ಮಧ್ಯೆಯೇ ಮತ್ತೊಂದು ಹಿಂದೂಪರ ಪಕ್ಷ ಎಂಟ್ರಿ !!

ಹಿಂದೂ ಸಂಘಟನೆಗಳ ವಿರುದ್ಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಕೆಂಗಣ್ಣು ಬೀರಿರುವ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಸಂಘಟನೆ ಕಾಲಿಡಲು ಕ್ಷಣಗಣನೆ ನಡೆದಿದೆ.

ಹೌದು ಕರ್ನಾಟಕಕ್ಕೆ ಅಧಿಕೃತ ಎಂಟ್ರಿಗೆ ಶಿವಸೇನೆ ಸಜ್ಜಾಗಿದ್ದು, ಇದೇ ಜನವರಿ 12 ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಶಿವಸೇನೆ ಕಾರ್ಯಾರಂಭ ಮಾಡಲಿದೆ. ಹುಬ್ಬಳ್ಳಿಯಲ್ಲಿ ಅಧಿಕೃತವಾಗಿ ಜನವರಿ 12 ರಂದು ಕರ್ನಾಟಕ ಶಿವಸೇನೆ ಉದ್ಘಾಟನೆಯಾಗಲಿದ್ದು, ಆರಂಭದಲ್ಲಿ ಪ್ರಮೋದ ಮುತಾಲಿಕ್ ಶಿವಸೇನೆಯಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಆದರೇ ಕೆಲವು ದಿನಗಳ ನಂತರ ಮುತಾಲಿಕ್​ ಸೇರ್ಪಡೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಪ್ರಮುಖ ಕುಮಾರ ಹಕಾರೆ ಹಾಗೂ ಆಂದೋಲನಶ್ರೀಗಳ ಸಮ್ಮುಖದಲ್ಲಿ ಶಿವಸೇನೆ ವಿಂಗ್​ ಆರಂಭವಾಗಲಿದೆ.

ಶಿವಸೇನೆ ಪ್ರಮುಖರಾದ ಅರವಿಂದ ನಾಗೋರೆ, ಕರ್ನಾಟಕ ರಾಜ್ಯ ಶಿವಸೇನೆ ಸಹ ಸಂಪರ್ಕ ಪ್ರಮುಖರಾಗಿದ್ದು, ಕಲಬುರಗಿಯ ಆಂದೋಲ ಮಠದ ಶ್ರೀಗಳು ಪ್ರಮುಖ, ರಾಜು ಬವಾನೆ, ಹೈದರಾಬಾದ್ ಕರ್ನಾಟಕ, ಕುಮಾರ ಹಕಾರೆ, ಉತ್ತರ ಕರ್ನಾಟಕ, ಮಧುಕರ ಮುದ್ರಾಡಿ, ಮಂಗಳೂರು ಕರ್ನಾಟಕ, ಶಿವಕುಮಾರ ರೆಡ್ಡಿ, ಬೆಂಗಳೂರು ಡಿವಿಷನ್ ಗೆ ನೇಮಕ ಮಾಡಲಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಇನ್ನೊಂದು ಸಂಘಟನೆ ಹುಟ್ಟಿಕೊಂಡಂತಾಗಿದ್ದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಸಂಚಲನ ಮೂಡುವ ಸಾಧ್ಯತೆ ಇದೆ.