ಪ್ರಿಯತಮನ ಮನೆ ಎದುರು ನಡೆಯಿತು ಪ್ರಿಯತಮೆಯ ಹೈಡ್ರಾಮಾ

ಆತ ವಿಧವೆಗೆ ಪ್ರೀತಿ-ಪ್ರೇಮದ ಕನಸು ತೋರಿಸಿದ್ದ ಅಷ್ಟೇ ಅಲ್ಲ ಗುಟ್ಟಾಗಿ ಸಂಸಾರನೂ ನಡೆಸುತ್ತಿದ್ದ.

ad


 ಆದರೇ ಇದಕ್ಕಿದ್ದಂತೆ ಆತ ಆಕೆಯನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದ ಫಲವಾಗಿ ಅಲ್ಲಿ ನಡೆದು ಹೋಯಿತು ಮಹಾಯುದ್ಧ. ಹೌದು ಮಡಿಕೇರಿಯಲ್ಲಿ ನಡೆದ ಲವ್​​ ಸೆಕ್ಸ್​ ದೋಖಾ ಕತೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ಯಮುನಾ ಎಂಬಾಕೆ ವಿಧವೆಯಾಗಿದ್ದು, ಕೆಲ ವರ್ಷಗಳ ಹಿಂದೆ ರಾಜೇಶ್ ಎಂಬಾತನ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರು ರಹಸ್ಯವಾಗಿ ಸಂಸಾರನೂ ಮಾಡ್ತಿದ್ದರು. ಆದರೇ ಇತ್ತೀಚಿಗೆ ಯಶೋಧ್​ಳನ್ನು ರಾಜೇಶ್ ನಿರ್ಲಕ್ಷಿಸಲು ಆರಂಭಿಸಿದ್ದ. ಇದರಿಂದ ಮನನೊಂದು ಯಶೋಧ್ ಆತ್ಮಹತ್ಯೆಗೂ ಯತ್ನಿಸಿದ್ದಳು.

ಅಲ್ಲದೇ ರಾಜೇಶ್​ ಮನವೊಲಿಸಲು ಆರಂಭಿಸಿದ್ದಳು. ಆದರೂ ರಾಜೇಶ್​ ಬದಲಾಗಿರಲಿಲ್ಲ. ಹೀಗಾಗಿ ಯಶೋಧ್​ ರಾಜೇಶ್​ ಮನೆಗೆ ತೆರಳಿದ್ದಳು. ಈ ವೇಳೆ ಯಶೋಧ್​ ಮತ್ತು ರಾಜೇಶ್ ನಡುವೆ ಜಗಳವಾಗಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾಳೆ. ಅಲ್ಲದೇ ಯಶೋಧ್​ಳನ್ನು ರಾಜೇಶ್​ ಮನೆಯಿಂದ ಹೊರಕ್ಕೆ ತಳಿದ್ದು, ಆಕೆ ಬಿದ್ದು ಹೊರಳಾಡಿದ್ದಾಳೆ. ಅಲ್ಲದೇ ರಾಜೇಶ್ ಪೊಲೀಸ್ ಠಾಣೆಯಲ್ಲೂ ತನ್ನ ಕೇಸ್ ತೆಗೆದುಕೊಳ್ಳದಂತೆ ಲಂಚ ನೀಡಿದ್ದಾನೆ ಎಂದು ಯಶೋಧಾ ಆರೋಪಿಸಿದ್ದಾಳೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆದ ಅನಾಚಾರ ಬೀದಿಗೆ ಬಂದಿದ್ದು, ಇಬ್ಬರು ರಸ್ತೆಯಲ್ಲಿ ಬಡಿದಾಡಿಕೊಂಡು ಸುದ್ದಿಯಾಗಿದ್ದಾರೆ.