ಎಣ್ಣೆ ಬೇಕು ಎಣ್ಣೆ! ಕಾಫಿನಾಡಿನಲ್ಲಿ ಡ್ರಿಂಕ್ಸ್​ ಕೊಡಿಸದ ಪತಿಗೆ ಚಪ್ಪಲಿಯಲ್ಲಿ ಥಳಿಸಿದ ಪತ್ನಿ! ವಿಡಿಯೋ ವೈರಲ್​!!

ಕುಡಿದ ಅಮಲಿನಲ್ಲಿ ಪತಿ  ಪತ್ನಿಗೆ ಹೊಡೆದಿರುವುದನ್ನು ನೀವು ನೋಡಿರ್ತೀರಾ. ಆದರೆ ಚಿಕ್ಕಮಗಳೂರಿನಲ್ಲಿ ಪತ್ನಿಯೊಬ್ಬಳು ಎಣ್ಣೆ ಕೊಡಿಸದ ಪತಿ ಬಳಿ ಗಲಾಟೆ ಮಾಡಿ  ರಸ್ತೆಯಲ್ಲೇ ಗಂಡನನ್ನು ಥಳಿಸಿದ ಘಟನೆ ನಡೆದಿದೆ.

ad

ಹೌದು  ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿರುವ ಬಾರಿನ ಮುಂದೆಯೇ ಇಂತಹದೊಂದು ಹೈಡ್ರಾಮಾ ನಡೆದಿದೆ. ಗ್ರಾಮೀಣ ಪ್ರದೇಶದ ಪತಿ -ಪತ್ನಿ ನಗರಕ್ಕೆ ಬಂದಿದ್ದು, ಬಾರಿನಲ್ಲಿ ಎಣ್ಣೆ ಸೇವಿಸಿದ್ದಾರೆ. ಆದರೆ ಪತ್ನಿ ಮತ್ತಷ್ಟು ಎಣ್ಣೆಗೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೆ ಪತಿ ಒಪ್ಪಿಲ್ಲ. ಇದರಿಂದ ಕೆರಳಿದ  ಪತ್ನಿ ನಡುರಸ್ತೆಯಲ್ಲೇ ಪತಿ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾಳೆ.

 

ನಡುರಸ್ತೆಯಲ್ಲೇ ಚಪ್ಪಲಿಯಲ್ಲಿ ಗಂಡನಿಗೆ ಹಲ್ಲೆ ನಡೆಸಿದ್ದು, ಸಾರ್ವಜನಿಕರು ಪತ-ಪತ್ನಿ ಜಗಳ ಬಿಡಿಸುವ ಬದಲು ಸುತ್ತ ನಿಂತು ಚೆಂದ ನೋಡಿ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ  ಹರಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಬದಲಾದ ಕಾಲಘಟ್ಟದಲ್ಲಿ ಹೆಣ್ಮಕ್ಕಳು ಎಣ್ಣೆಗಾಗಿ ನಡುರಸ್ತೆಯಲ್ಲೇ ಫೈಟಿಂಗ್​ ಇಳಿಯುವ ಸ್ಥಿತಿ ನಿರ್ಮಾಣವಾಗಿರೋದು ಮಾತ್ರ ದುರಂತವೇ ಸರಿ.

ಎಣ್ಣೆ ಕೊಡಿಸದ ಪತಿಗೆ ಚಪ್ಪಲಿ ಪೂಜೆ ಮಾಡಿದ ಪತ್ನಿ

ಎಣ್ಣೆ ಕೊಡಿಸದ ಪತಿಗೆ ಚಪ್ಪಲಿ ಪೂಜೆ ಮಾಡಿದ ಪತ್ನಿ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 18, 2019