ಕೀರ್ತಿ ಬಗ್ಗೆ ಸ್ಪೋಟಕ ದಾಖಲೆ ಕೊಡ್ತಿನಿ- ದುನಿಯಾ ವಿಜಯ ಪತ್ನಿ ನಾಗರತ್ನಾ ಗುಡುಗು!

 

ad

ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿ ಬೇಲ್​ ಮೇಲೆ ಹೊರಬಂದಿರುವ ನಟ ದುನಿಯಾ ವಿಜಿ ಮನೆಜಗಳ ಸಧ್ಯಕ್ಕೆ ಮುಗಿಯುವ ಲಕ್ಷಣವೇ ಇಲ್ಲ. ಹೌದು ನಾಗರತ್ನಾ ಮೇಲೆ ದುನಿಯಾ ವಿಜಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ನಾಗರತ್ನಾ ಹೊಸ ಬಾಂಬ್​ವೊಂದನ್ನು ಸಿಡಿಸಿದ್ದು, ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಕೀರ್ತಿ ಗೌಡ ಅಸಲಿಯತ್ತು ಬಿಚ್ಚಿಡುವುದಾಗಿ ಹೇಳಿದ್ದಾಳೆ.
ಮೊನ್ನೆ ಜೈಲಿನಿಂದ ಬಿಡುಗಡೆಯಾಗಿ ಬಂದ ನಟ ದುನಿಯಾ ವಿಜಿ ಮನೆಯಲ್ಲೇ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ತಮ್ಮ ಮೊದಲ ಪತ್ನಿ ನಾಗರತ್ನಾ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಇದಕ್ಕೆಲ್ಲ ಉತ್ತರ ನೀಡಲು ಹಾಗೂ ದುನಿಯಾ ವಿಜಿಯವರನ್ನು ಮದುವೆಯಾಗಿದ್ದೇನೆ ಎಂದಿರುವ ಕೀರ್ತಿಗೌಡ್ ಗೆ ಉತ್ತರ ನೀಡಲು ನಾಗರತ್ನಾ ಇಂದು ಸಂಜೆ ಸುದ್ದಿ ಗೋಷ್ಠಿ ನಡೆಸಲಿದ್ದಾರೆ.

ಈ ಬಗ್ಗೆ ಬಿಟಿವಿ ನ್ಯೂಸ್​ ಜೊತೆ ಮಾತನಾಡಿದ ನಾಗರತ್ನಾ, ಸಂಜೆ ಸುದ್ದಿ ಗೋಷ್ಠಿ ನಡೆಸುತ್ತೇನೆ ಅಲ್ಲದೇ ಕೀರ್ತಿ ಗೌಡ ಕುರಿತ ಹಲವು ದಾಖಲೆಗಳನ್ನ ಬಿಡುಗಡೆ ಮಾಡ್ತೀನಿ. ಆಕೆ ಎಲ್ಲೆಲ್ಲಿ ಆಟ ಆಡಿಕೊಂಡು ಬಂದಿದ್ದಾಳೋ. ಆಕೆಗೆ ಎಷ್ಟು ಜನ ಬಾಯ್​ಪ್ರೆಂಡ್ಸ್​ ಇದ್ದರೂ ಆ ಎಲ್ಲಾ ದಾಖಲೆಗಳನ್ನ ಕಲೆಕ್ಟ್​​ ಮಾಡ್ತಿದ್ದೀನಿ ಅದನ್ನು ನಿಮ್ಮ ಮುಂದೆ ಇಡ್ತೀನಿ ಅಂತ ನಾಗರತ್ನ ಹೇಳಿದ್ದಾರೆ. ಒಟ್ಟಿನಲ್ಲಿ ದುನಿಯಾ ವಿಜಯ್ ಮನೆಜಗಳ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಲಕ್ಷಣವಿದೆ.