9 ತಿಂಗಳ ಆಗಲಿ- 9 ದಿನ ಆಗಲಿ ಸರ್ಕಾರ ಟ್ರಾನ್ಸಫರ್ ಮಾಡಿದ್ರೇ ಹೋಗ್ತಾ ಇರಬೇಕು- ಅಧಿಕಾರಿಗಳ ಬಗ್ಗೆ ಸಚಿವ ರಾಯರೆಡ್ಡಿ ದರ್ಪದ ಮಾತು!!

ರಾಜ್ಯದಲ್ಲಿ ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಕ್ತವಾದ ವಾತಾವರಣ ಇಲ್ಲ ಕೂಗು ಜೋರಾಗಿರುವಾಗಲೇ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಉಡಾಫೆ ಹೇಳಿಕೆಯೊಂದನ್ನು ನೀಡಿದ್ದಾರೆ.

ನಿಜವಾಗಲೂ ಅಧಿಕಾರಿಗಳಿಗೇ ಇಲ್ಲಿ ಉಳಿಗಾಲ ಇಲ್ಲ ಎಂಬುದು ಬಸವರಾಜ್ ರಾಯರೆಡ್ಡಿ ಹೇಳಿಕೆಯಿಂದ ಸಾಬೀತಾಗಿದೆ. ಅಧಿಕಾರಿಗಳು ದೊಡ್ಡವರಲ್ಲ ಎಂದಿರುವ ರಾಯರೆಡ್ಡಿ ಸರ್ಕಾರ ಹಾಕಿದಲ್ಲಿ ಹೋಗಬೇಕು ಎಂದು ಉಢಾಪೆ ಉತ್ತರ ನೀಡಿದ್ದಾರೆ. ಹೌದು ಕೊಪ್ಪಳದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ಅಧಿಕಾರಿಗಳೇನು ಮೇಲಿಂದ ಬಂದವರಾ? ಅಧಿಕಾರಿಗಳನ್ನು ನೀವು ಸುಮ್ಮನೇ ಹೀರೋ ಮಾಡ್ತಿದ್ದೀರಾ. ಸರ್ಕಾರಕ್ಕಿಂತ ದೊಡ್ಡವರಾ ಅಧಿಕಾರಿಗಳು ಎಂದು ಪ್ರಶ್ನೆ ಮಾಡಿದ್ದಾರೆ.

ಒಂಬತ್ತು ತಿಂಗಳಲ್ಲ ಸರ್ಕಾರ ಆರ್ಡರ್ ಮಾಡಿದ್ರೆ ಅಧಿಕಾರಿಗಳು 9 ದಿನದಲ್ಲೇ ವರ್ಗಾವಣೇಯಾಗಬೇಕು ಎನ್ನುವ ಮೂಲಕ ಮತ್ತೊಮ್ಮೆ ಸರ್ಕಾರ ಅಧಿಕಾರಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಸ್ವತಃ ಬಸವರಾಜ ರಾಯರೆಡ್ಡಿಯವರೇ ಬಿಚ್ಚಿಟ್ಟಂತಾಗಿದೆ. ಈ ವರ್ಷ ಚುನಾವಣೆಯಲ್ಲಿ ಜಾತಿ ನಡೆಯೋದಿಲ್ಲ ಎಂದ ಬಸವರಾಜ ರೆಡ್ಡಿ, ಜನರನ್ನು ಭ್ರಷ್ಟ ಮಾಡಿದ್ದೇ ರಾಜಕೀಯ ಪಕ್ಷಗಳು. ಜನ ಏನೂ ಕೇಳಲ್ಲ. ಜಾತಿ,ಹಣ,ಜಾತಿ ಕೇಳಲ್ಲ. ನಾವು ಹೋಗಿ ಅವರಿಗೆ ಜಾತಿ,ಹಣ ಕೊಡ್ತೀವಿ ಎಂದು ಟೀಕಿಸಿದ್ದಾರೆ. ಆದರೇ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಿದೆ ಎಂಬುದು ಸಾಬೀತಾದಂತಾಗಿದೆ.