ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡದಿದ್ದರೆ ಖುರ್ಚಿಯಲ್ಲಿ ಉಳಿಯಲ್ಲ: ಸಿಎಂ ಕಟ್ಟಿರೋ ವಾಚ್ ಯಾರಪ್ಪಂದು ? ಬಿಎಸ್ ವೈ

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಆದೇಶ ಹೊರಡಿಸಲು‌ ಸಾಧ್ಯವಾಗದೇ ಇದ್ದರೆ ಇಂದು ಗಂಟೆಯೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ad

ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಎರಡು ವರ್ಷದ ಹಿಂದೆ ಅಂಬೇಡ್ಕರ್ ಜನ್ಮದಿನದಂದು ರಾಜ್ಯಾಧ್ಯಕ್ಷ ಆಗಿ ಅಧಿಕಾರ ಸ್ವೀಕಾರ ಮಾಡಿದ ನಂತರ, ಮೂರು ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ, ಅದರ ಆಧಾರದಲ್ಲಿ ಅಭ್ಯರ್ಥಿ ಪಟ್ಟಿ ನೀಡಿದ್ದೆ, ಅಮಿತ್ ಶಾ ಮೂರು ಸರ್ವೇ ಮಾಡಿದ್ದು, ನಾನು ಕೊಟ್ಟ ಅಭ್ಯರ್ಥಿಗಳ ಶೇ.95 ಭಾಗ ಹೊಂದಾಣಿಕೆ ಆದ ಕಾರಣ ಅಭ್ಯರ್ಥಿ ಆಯ್ಕೆ ಗೊಂದಲ ಆಗಲಿಲ್ಲ ಎಂದರು. ಚುನಾವಣಾ ಪ್ರಚಾರ ಸಮಾವೇಶಗಳ ವೇಳೆ ಮೋದಿ,ಶಾ ಪ್ರವಾಸದಲ್ಲಿ‌ ಬಿಎಸ್ವೈ ಭಾಗಿಯಾಗಬೇಕಿಲ್ಲ, ಬೇರೆ ಕಡೆ ಹೋಗಲು ನಾಯಕರ ಅಪೇಕ್ಷೆ ಇದೆ ಹಾಗಾಗಿ ನಾನು ಬೇರೆ ಕಡೆ ಪ್ರವಾಸ ಮಾಡುತ್ತಿದ್ದೇನೆ, ಮಾದರಿ ರಾಜ್ಯ, ಸ್ವಚ್ಚ,ದಕ್ಷ ಪ್ರಾಮಾಣಿಕ ಆಡಳಿತ ನೀಡುವ ಕನಸು ನಮ್ಮದು, ದೈವ ಬಲ,ಜನ ಬಲ ನನಗೆ ಇದ್ದು 150 ಸ್ಥಾನ ಗೆದ್ದು ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದರು.

ಸಿಲಿಕಾನ್ ಸಿಟಿ ಇಂದು ಗಾರ್ಬೇಜ್, ರೇಪ್, ಸಿಟಿ ಆಗಿದೆ,ಕೊಲೆ ಸುಲಿಗೆ ನಡೆಯುತ್ತಿದೆ ಇದನ್ನು ಮೊದಲ ಸ್ಥಿತಿಗೆ ತರುವುದಕ್ಕೆ ನನ್ನ ಮೊದಲ ಆಧ್ಯತೆ ನೀಡುತ್ತೇನೆ, ಹಿಂದೆ 120 ಗೆದ್ದಿದ್ದರೆ ಗೊಂದಲ ಆಗುತ್ತಿರಲಿಲ್ಲ, ಈಗ ಅದರ ಅನುಭವ ಇದೆ ಹಾಗಾಗಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡು ಮೂರು ವರ್ಷ ರಾಜ್ಯದಲ್ಲಿ ಬರಗಾಲ ಬಂದಿದ,ಹಾಗಾಗಿ ಸಿಎಂ ಆದ ದಿನವೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ 1 ಲಕ್ಷದವರೆಗಿನ ಸಾಲ ಮನ್ನಾ ,ಸಹಕಾರಿ ಬ್ಯಾಂಕ್ ಸಾಲ 1 ಲಕ್ಷದವರೆಗೆ ಮನ್ನಾಗೆ ವಿಸ್ತರಣೆ ಮಾಡುತ್ತೇನೆ, ಸುವರ್ಣ ಭೂಮಿ ಯೋಜನೆ ಇಪ್ಪತ್ತು ಲಕ್ಷ ರೈತರಿಗೆ ವಿಸ್ತರಣೆ ಮಾಡಿತ್ತೇವ, ನೀರಾವರಿಗೆ 1.5 ಲಕ್ಷ ಕೋಟಿ ಮೀಸಲು, 2 ಲಕ್ಷದವರೆಗೆ ಭಾಗ್ಯಲಕ್ಷ್ಮಿ‌ಯೋಜನೆ ಸವಲತ್ತು ವಿಸ್ತರಣೆ. ಸರ್ಕಾರಿ ಕಾಲೇಜು, ಶಾಲೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು, ಸ್ತ್ರೀಶಕ್ತಜ ಸ್ವಸಹಾಯ ಗುಂಪು ಬಲಪಡಿಸಲು 2 ಲಕ್ಷ ರೂ.ವರೆಗೆ ಶೇ. 3 ರ ಬಡ್ಡಿದದ ಸಾಲ. ಬಡವರ ಮದುವೆಗೆ 25 ಸಾವಿರ ಹಣ ಹಾಗು ಮೂರು ಗ್ರಾಂ ಚಿನ್ನದ ತಾಳಿ ಸೌಲಭ್ಯ ಕೊಡುವ ಆಶ್ವಾಸನೆಯನ್ನು ಪ್ರಾಣಾಳಿಕೆಯಲ್ಲಿ ನೀಡಿರುವಾಗಿ ಹೇಳಿದರು.

ಕೆಪಿಸಿಸಿ ಎನ್ನುವುದ ಪರಮೇಶ್ವ್, ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ತಂಡ ಎಂದು ಮೂರು ಭಾಗವಾಗಿದೆ ಮೂರು ಜನ ಒಟ್ಟಿಗೆ ಓಡಾಡಿ ಎಂದು ಯಡಿಯೂರಪ್ಪ ಸಿಎಂಗೆ ಸವಾಲು ಎಸೆದರು. ಚಾಮುಂಡೇಶ್ವರಿ ಸೋಲು ನಿಶ್ಚಿಯ ಆದ ನಂತರ ಬಾದಾಮಿಗೆ ಹೋಗಿದ್ದಾರೆ,ಆದರೆ ಅಲ್ಲಿಯೂ ನೀವು ಸೋಲುತ್ತೀರಿ,ಕೊನೆಯ ಕಾಂಗ್ರೆಸ್ ಸಿಎಂ ಆಗುತ್ತೀರಿ ಎಂದರು. ಬಳ್ಳಾರಿ ಇಬ್ಬರು ಕಾಂಗ್ರೆಸ್ ಗೆ ಹೋದರು.ಆದರೆ ರಾಮುಲು ಸೇರಿ ಉಳಿದವರು ಇದ್ದಾರೆ, ಅವರಿಗೆ ಟಿಕೆಟ್ ನೀಡಿದ್ದೇವೆ, ಅವರು ಗೆಲ್ಲಲಿದ್ದಾರೆ, ಜನಾರ್ದನೆ ರೆಡ್ಡಿ ಚುನಾವಣೆ ಟಿಕೆಟ್ ಕೇಳಲಿಲ್ಲ, ಅವರೇ ಬಂದು ಪ್ರಚಾರ ಮಾಡುತ್ತಿದ್ದಾರೆ, ನಾವು ವಿರೋಧಿಗಳ ಮನೆಗೂ ಮತ ಕೇಳಲು ಹೋಗುತ್ತೇವೆ, ಹಳೆಯದು ಮರೆತು ಹೋಗುತ್ತಿದ್ದೇವೆ. ಬಿಜೆಪಿಯಲ್ಲಿ ಜನಾರ್ದನ ರೆಡ್ಡಿ ಇಲ್ಲ, ಅವರಿಗೆ ಟಿಕೆಟ್ ನೀಡಿಲ್ಲ, ಒಮ್ಮೆ ವೇದಿಕೆ ಹಂಚಿಕೊಂಡಿದ್ದು ನಿಜ,ಕೋರ್ಟ್ ನಿರ್ದೇಶನದ ನಂತರ ವೇದಿಕೆ‌ ಹತ್ತಿಸಿಲ್ಲ, ಮುಂದೆಯೂ ಎಚ್ಚರ ವಹಿಸುತ್ತೇವೆ ಎಂದರು.

ಕೈಕಾಲು ಕಟ್ಟಿ ಮತಕೇಳಿ ಎಂದರೆ ಕಾಲಿಗೆ ಬಿದ್ದು ಮತ ಕೇಳಿ ಎಂದು ನಮ್ಮ ಕಡೆ ಅರ್ಥವೇ ಹೊರತು ಕೈಕಾಲಿಗೆ ಹಗ್ಗ ಕಟ್ಡಿ ಎಂದಲ್ಲ ಎಂದು ನಿನ್ನೆ ನೀಡಿದ ಹೇಳಿಕೆಗ ಯಡಿಯೂರಪ್ಪ ಸ್ಪಷ್ಟೀಕರಣ ನೀಡಿದರು. ಚಾಮುಂಡೇಶ್ವರಿಯಲ್ಲಿ‌ ಯಾಕೆ ವಿಶ್ವಾಸವಿಲ್ಲ, ಬಾದಾಮಿಗೆ ಯಾಕೆ ಹೋದರು?,ಪರಂ,ಖರ್ಗೆ ನೀವು ಕಳದ ಒಂದು ತಿಂಗಳಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೀರಾ? ಧರ್ಮ, ಸಂಸ್ಕೃತಿ,ಆಚಾರ,ವಿಚಾರ ಸಂಬಂಧ ನಾವು ಯಾರಿಂದಲೂ ಪಾಠ ಹೇಳಿಸಿಕೊಳ್ಳಬೇಕಿಲ್ಲ.ಆದರ ನಮ್ಮ ಪದ ಯಾರಿಗೂ ಹರ್ಟ್ ಆಗಬಾರದು ಎನ್ನುವುದನ್ನ ಒಪ್ಪುತ್ತೇವೆ ಎಂದು ತಮ್ಮ ಕಠಿಣ ಪದಗಳ ಪ್ರಯೋಗಕ್ಕೆ ಸ್ಪಷ್ಟೀಕರಣ ನೀಡಿದರು.

ಜೆಡಿಎಸ್ ಬೆಂಬಲದ ಪ್ರಶ್ನೆಯೇ ಉದ್ಭವವಾಗಲ್ಲ, ಅಂತಹ ಪರಿಸ್ಥಿತಿ ನಿರ್ಮಾಣ ಆಗಲ್ಲ, ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ದಲಿತ ಸಮುದಾಯಕ್ಕೆ ಅವಮಾನ ಮಾಡಿರುವುದು ಬಿಜೆಪಿಯಲ್ಲ, ಕಾಂಗ್ರೆಸ್ ಅವಮಾನ ಮಾಡಿದೆ, ಅಂಬೇಡ್ಕರ್ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲಿಲ್ಲ, ಅವರನ್ನೇ ಸೋಲಿಸಿದರು, ಜಗಜೀವನ್ ರಾಂ ಪ್ರಧಾನಿ ಮಾಡಲು ಅಡ್ಡಿಪಡಿಸಿದರು ಇವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ಆದರೆ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಹೇಳಿಕೆ ಸರಿಯಲ್ಲ, ಅವರಿಗೆ ವಾರ್ನ್ ಮಾಡಿದ್ದೇವೆ,ಬಾಯ್ತಪ್ಪಿಯೂ ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡಿದಂತೆ ಸೂಚಿಸಿದ್ದೇವೆ ಎಂದರು. 2006 ರಲ್ಲಿ ಸಿದ್ದರಾಮಯ್ಯಗೆ ನಾವು ಆಹ್ವಾನ ನೀಡಿರಲಿಲ್ಲ, ಅವರು ಬಂದಿದ್ದರೂ ಸೇರಿಸುತ್ತಿರಲಿಲ್ಲ, ಅದರ ಬಗ್ಗೆ ನಾನು ಹೇಳಿಲ್ಲ, ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದು ಸಿಎಂ ಬಿಜೆಪಿ ಸೇರಲು ಹೊರಟಿದ್ದರು ಎನ್ನುವ ವಿವಾದ ಕುರಿತು ಸ್ಪಷ್ಟನೆ ನೀಡಿದರು. ಮೋದಿ ಅಲೆ ಇದೆಯೋ ಇಲ್ಲವೋ ಎಂದು ಮೇ 15 ರಂದು ಗೊತ್ತಾಗಲಿದೆ, ಮೋದಿ ಹೋದ ಕಡೆ ಲಕ್ಷಾಂತರ ಜನ ಸೇರುತ್ತಿದ್ದಾರೆ, ರಾಷ್ಟ್ರೀಯ ಹೆದ್ದಾರಿ ಇತ್ಯಾದಿ ಯೋಜನೆಗಳ ಕುರಿತು ಹತ್ತು ಪಟ್ಟು ಹೆಚ್ಚಾಗಿ ಅನುದಾನ ಕೊಟ್ಟಿದ್ದಾರೆ, ಹಾಗಾಗಿ ಬಿಜೆಪಿ ಗೆಲುವು ಖಚಿತ ಎಂದರು.

ಲಿಂಗಾಯತ ಧರ್ಮ ಚುನಾವಣಾ ವಿಷಯವಲ್ಲ, ಅದನ್ನು ಚುನಾವಣಾ ವಿಷಯ ಮಾಡಿದ್ದೇ ಸಿದ್ದರಾಮಯ್ಯ, ಧರ್ಮ ವಿಭಜನೆ ತಿರುಗುಬಾಣವಾದ ಬಳಿಕ‌ ಈಗ ಮೌನವಾಗಿದ್ದಾರೆ ಎಂದು ಸಿಎಂ ವಿರುದ್ಧ ಯಡಿಯೂರಪ್ಪ ಹರಿಹಾಯ್ದರು. ನಾನು ಬದುಕಿರುವುದೇ ರೈತರಿಗಾಗಿ,,ಮಹದಾಯಿ ಕಾಂಗ್ರೆಸ್ ನ ಪಾಪದ ಕೂಸು, ಸೋನಿಯಾ ಗಾಂಧಿ ಗೋವಾಗೆ ಹೋಗಿ ಹನಿ ನೀರು ಬಿಡಲ್ಲ ಎಂದಿದ್ದರು,ಈಗ ರಾಹುಲ್,ಸೋನಿಯಾ ಒಂದು ಮಾತಾಡಿದಾರಾ, ಪ್ರಧಾನಿಗೆ ಗಂಭೀರತೆ ಅರ್ಥವಾಗಿ ಈಗ ಹೇಳಿಕೆ ನೀಡಿದ್ದಾರೆ.ಅಧಿಕಾರಕ್ಕೆ ಬಂದ ನಂತರ ನ್ಯಾಯಾಧಿಕರಣಕ್ಕೆ ಪ್ರಮಾಣಪತ್ರ ಸಲ್ಲಿಸಿ ನ್ಯಾಯಾಧಿಕಾರಣದ ಹೊರಗೆ ವಿವಾದ ಪರಿಹಾರ ಮಾಡಲು ಯತ್ನಿಸುತ್ತೇವೆ ಎಂದರು.

ಗೆಲ್ಲುವ ವಿಶ್ವಾಸವಿಲ್ಲದ ಕಾರಣ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಈಗ ಮಾತ್ರವಲ್ಲ, ಕಳೆದ ಬಾರಿ 110 ಇದ್ದಾಗಲೂ ಮುಸ್ಲಿಂ ಅಭ್ಯರ್ಥಿ ಇರಲಿಲ್ಲ,ಆದರೆ ನಮ್ಮ ಸರ್ಕಾರ ಬಂದ ಕೂಡಲೇ ಓರ್ವ ಮುಸ್ಲಿಂಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದರು. ಜಾತಿ ವಿಷಬೀಜ ಬಿತ್ತಿ ಯಾವುದೋ ಸಮುದಾಯದ ಓಲೈಕೆ ಮಾಡುವ 9 ದಿನದಲ್ಲಿ ಮನೆಗೆ ಹೋಗುವವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ, ಯಾರು ಕೋಮುವಾದಿ,ಜಾತಿವಾದಿ ಎಂದು ಜನರಿಗೆ ಗೊತ್ತು ಎಂದು ಕೋಮುವಾದಿ ಪಕ್ಷ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಕಿಡಿಕಾರಿದರು. ವಿಜಯೇಂದ್ರಗೆ ಟಿಕೆಟ್ ತಪ್ಪಿದ ನಂತರ ಅವರನ್ನು ಯುವ ಮೋರ್ಚಾಗೆ ನೇಮಕ ಮಾಡದ್ದರಲ್ಲಿ ತಪ್ಪೇನಿದೆ,ಅವರ ವರ್ಚಸ್ಸು ನೋಡಿ ಪಕ್ಷ ಹುದ್ದೆ ನೀಡಿದೆ, ಇದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಪದೇ ಪದೇ ವಿಜಯೇಂದ್ರಗೆ ಟಿಕೆಟ್ ತಪ್ಪಿದ ಕುರಿತ ಪ್ರಶ್ನೆಗೆ ಯಡಿಯೂರಪ್ಪ ಗರಂ ಆದು. ಹೈಕೋರ್ಟ್,ಸುಪ್ರೀಂ ಕೋರ್ಟ್ ನಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ,ಆದರೂ ಪದೇ ಪದೇ ಜೈಲಿಗೆ ಹೋಗಿ ಬಂದವರು ಎಂದು ಸಿದ್ದರಾಮಯ್ಯಗೆ ಹೇಳಿಕೆ ನೀಡುತ್ತಿದ್ದಾರೆ, ಹಾಗಾದರೆ ಎಪ್ಪತ್ತು ಲಕ್ಷದ ವಾಚ್ ಹೇಗೆ ಬಂತು, ಯಾರಪ್ಪನ ವಾಚ್ ಅದು, ಯಾರು ಕೊಟ್ಟರು ಎಂದು ಸಿಎಂ ವಿರುದ್ಧ ಕೆಂಡಕಾರಿದರು.