ಎಮ್.ಎಲ್​.ಎ ಹೇಳಿದ್ರೆ ಬಂದ್​ ಮಾಡಬೇಕು ಅಷ್ಟೇ- ಅವಾಜ್ ಹಾಕಿದ್ದು ಯಾರು ಗೊತ್ತಾ?!

 

ad


ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡದ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಂದ್​ ಗೆ ಕರೆ ನೀಡಿದ್ದರು. ಆದರೆ ರಾಜ್ಯದಲ್ಲಿ ನೀರಿಕ್ಷಿತ ಬೆಂಬಲ್ ಸಿಕ್ಕಿಲ್ಲ. ಈ ಮಧ್ಯೆ ಯಾದಗಿರಿಯಲ್ಲಿ ಸ್ವತಃ ಬಿಜೆಪಿ ಶಾಸಕರೇ ಬಲವಂತದ ಬಂದ್ ಮಾಡಿಸುತ್ತಿದ್ದು, ಶಾಸಕ ವೆಂಕಟರೆಡ್ಡಿ ಮುದ್ನಾಳ್ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ವರ್ತಕರಿಗೆ ಧಮ್ಕಿ ಹಾಕಿದ್ದಾರೆ.
ನಗರದ ಹೊಸ ಬಸ್ ನಿಲ್ದಾಣ ಮುಂಭಾಗದ ಅಂಗಡಿಗಳನ್ನ ಬಂದ್ ಮಾಡಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಶ್ರೀ ಶಿರಡಿ ಸಾಯಿ ರೆಸ್ಟೋರೆಂಟ್ ಬಾಗಿಲು ಹಾಕಿ ಒಳಗಡೆ ಗ್ರಾಹಕರಿಗೆ ತಿಂಡಿ ಸರಬರಾಜು ಮಾಡಲಾಗ್ತಿತ್ತು. ಇದನ್ನ ಗಮನಿಸಿದ ಶಾಸಕ ವೆಂಕಟರೆಡ್ಡಿ ಮುದ್ನಾಳ್, ರೆಸ್ಟೋರೆಂಟ್ ಬಾಗಿಲು ತೆಗೆದು ಒಳಗೆ ಹೋಗಿ ಬಂದ್ ಮಾಡುವಂತೆ ಆವಾಜ್ ಹಾಕಿದ್ದಾರೆ.

ಅಲ್ದೆ ಗ್ರಾಹಕರನ್ನು ರೆಸ್ಟೋರೆಂಟ್​ನಿಂದ ಹೊರ ಹಾಕಿದ್ದಾರೆ. ಈ ವೇಳೆ ಗ್ರಾಹಕರು ಬಂದ್ ಮಾಡಲು ನೀವ್ಯಾರು ಅಂತ ತರಾಟೆಗೆ ತೆಗೆದುಕೊಂಡಾಗ ನಾನು ಎಂಎಲ್​ಎ. ನಾನು ಹೇಳಿದ್ರೆ ನೀವು ಬಂದ್ ಮಾಡಬೇಕು ಅಷ್ಟೇ ಎಂದು ಅವಾಜ್ ಹಾಕಿದ್ದಾರೆ. ಇದು ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಮದ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.