ಪ್ರಕಾಶ್​​ ರೈಗೆ ತಾಕತ್ತಿದ್ದರೇ ಪ್ರಧಾನಿಯಂತೆ ಒಳ್ಳೆ ಕೆಲಸ ಮಾಡಲಿ- ಹುಚ್ಚ ವೆಂಕಟ ಸವಾಲು!

 

ಫೈರಿಂಗ್ ಸ್ಟಾರ್ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್​ ಹಿರಿಯ ನಟ ಪ್ರಕಾಶ್ ರೈ ವಿರುದ್ಧ ಅಕ್ಷರಶಃ ಫೈರಿಂಗ್ ಮಾಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿ ಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಹುಚ್ಚ ವೆಂಕಟ, ಪ್ರಕಾಶ ರೈಯನ್ನು ಕಟುವಾಗಿ ಟೀಕಿಸಿದ್ದಾರೆ.

 

ಪ್ರಧಾನಿ ಮೋದಿಯನ್ನ ಪ್ರಕಾಶ್ ರೈ ಬೈದಿರೋದಿಕ್ಕೆ ಕೋಪಗೊಂಡಿರುವ ಹುಚ್ಚ ವೆಂಕಟ, ತಾಕತ್ತಿದ್ದರೇ ಪ್ರಕಾಶ ರೈ ತಾನು ಮಾಡಿರುವ ಒಳ್ಳೆಯ ಕೆಲಸಗಳನ್ನು ಹೇಳಲಿ ಸವಾಲು ಹಾಕಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿರುವ ಪ್ರಕಾಶ್ ರೈ, ನಿಜಜೀವನದಲ್ಲೂ ಖಳನಾಯಕನಾಗದಂತೆ ಕಿವಿ ಮಾತು ಹೇಳಿರುವ ಹುಚ್ಚ ವೆಂಕಟ, ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡದಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯನ್ನು ಬೈಯ್ದರೇ ಸಿನಿಮಾನದಲ್ಲಿ ಅವಕಾಶಗಳು ಹೆಚ್ಚು ಹೆಚ್ಚು ಸಿಗುತ್ತವೆ. ಅದಕ್ಕಾಗಿ ರೈ ಪ್ರಧಾನಿಯನ್ನು ಬೈತಿದ್ದಾರೆ ಎಂದು ಹುಚ್ಚ ವೆಂಕಟ ಸಂದೇಹ ಕೂಡ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇದುವರೆಗೂ ಬಲಪಂಥೀಯರ ಕೋಪಕ್ಕೆ ತುತ್ತಾಗುತ್ತಿದ್ದ ಪ್ರಕಾಶ್ ರೈ ಈ ಭಾರಿ ಹುಚ್ಚ ವೆಂಕಟಕ್ಕೂ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಪ್ರಧಾನಿ ಬಗ್ಗೆ ಲಘುವಾಗಿ ಮಾತಾಡಿರೋದಿಕ್ಕೆ ಹುಚ್ಚವೆಂಕಟ ಪ್ರಕಾಶ್ ರೈಗೆ ಸವಾಲು ಹಾಕಿರೋದು ಇದೀಗ ಸಖತ್ ವೈರಲ್ ಆಗಿದೆ..