ಲಕ್ಷ-ಲಕ್ಷ ಕೊಟ್ರೆ ವರ್ಗಾವಣೆ ಸಲೀಸು- ಇದು ಸಾರಿಗೆ ಇಲಾಖೆ ಕರ್ಮಕಾಂಡ!

ದೋಸ್ತಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿರುವಾಗಲೇ ಮತ್ತೊಂದು ವರ್ಗಾವಣೆ ದಂಧೆಯ ಸ್ಪೋಟಕ್​ ಸುದ್ದಿ ಬಹಿರಂಗವಾಗಿದೆ. ಸಾರಿಗೆ ಇಲಾಖೆಯಲ್ಲಿ ಈ ಭಾರಿಯ ವರ್ಗಾವಣೆ ದಂಧೆ ತೆರೆದುಕೊಂಡಿರುವುದಕ್ಕೆ ನಮಗೆ ಎಕ್ಸಕ್ಲೂಸಿವ್ ದಾಖಲೆ ಲಭ್ಯವಾಗಿದೆ.
ಸಾರಿಗೆ ಇಲಾಖೆಯ ಇನ್ಸಪೆಕ್ಟರ್​, ಸೀನಿಯರ್ ಇನ್ಸಪೆಕ್ಟರ್,ಎಆರ್ಟಿಈ,ಆರ್​.ಟಿ.ಓ,ಜೆಸಿ ಸೇರಿದಂತೆ ಹಲವು ಹುದ್ದೆಗಳನ್ನು ಈ ವರ್ಗಾವಣೆ ಲಾಭಿಗೆ ಬಳಸಿಕೊಳ್ಳಲಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿರುವ ಎಚ್​.ಸಿ.ಸತ್ಯನ್ ಎಂಬಾತನೇ ಈ ದಂಧೆಯ ಕಿಂಗ್ ಪಿನ್​ ಎನ್ನಲಾಗಿದೆ.
ಈತ ದೊಡ್ಡವರ ಪರಮಾಪ್ತನಾಗಿದ್ದು, ಲಕ್ಷ -ಲಕ್ಷ ಪಡೆದು ವರ್ಗಾವಣೆ ಮಾಡಿಸಿಕೊಡುವ ದಂಧೆ ಆರಂಭಿಸಿದ್ದಾನೆ. ಇದಕ್ಕೆ ಸಾರಿಗೆ ಇಲಾಖೆಯ ಸಚಿವರ ಆಪ್ತರು, ಹಿರಿಯ ಅಧಿಕಾರಿಗಳ ಸಮ್ಮತಿ ಮತ್ತು ಸಪೋರ್ಟ್​ ಕೂಡ ಇದೆ ಎಂಬ ಆರೋಪ ಕೇಳಿಬಂದಿದೆ.