ಈ ವೈದ್ಯೆಯ ಡ್ಯಾನ್ಸ್ ನೋಡಿದ್ರೆ ರೋಗವೆಲ್ಲಾ ಮಾಯ !! ಕೆ ಆರ್ ಪುರಂ ನಲ್ಲಿ ಎಂಬಿಬಿಎಸ್ ನೃತ್ಯ !! ಡಾಕ್ಟರ್ಸ್ ಡೇ ಸ್ಪೆಷಲ್

ad


ಪ್ರತಿದಿನ ರೋಗಿಗಳೊಂದಿಗೆ ಬ್ಯುಜಿಯಾಗಿರುವ ವೈಧ್ಯರು ವೈಧ್ಯರ ದಿನಾಚರಣೆಯ ಅಂಗವಾಗಿ ಇಂದು ತಮ್ಮೆಲ್ಲಾ ಜಂಜಾಟಗಳನ್ನು ಬದಿಗೊತ್ತಿ ಕುಣಿದು ಕುಪ್ಪಳಿಸಿದರು. ಕೆಆರ್ ಪುರದಲ್ಲಿ ನೂತನವಾಗಿ ಆರಂಭವಾಗಿರುವ ಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈಧ್ಯರು ಮತ್ತು ಸಿಬ್ಬಂದಿ ಕುಣಿದು ಕುಪ್ಪಳ್ಳಿ ನೆರೆದಿದ್ದ ಜನರನ್ನು ರಂಜಿಸಿದರು.

 

 

ಹೌದು. ವೈದ್ಯರೆಂದರೆ ಎರಡು ರೀತಿಯ ವರ್ತನೆ ತೋರುವವರು ಇರುತ್ತಾರೆ. ಒಂದು ಸದಾ ಮುಖ ಗಂಟಿಕ್ಕೋ ವೈದ್ಯರು, ಮತ್ತೊಂದು ನಗುಮುಖದ ಸೇವೆ ಮಾಡೋ ವೈದ್ಯರು. ಇದರ ಹೊರತಾಗಿ ವೈದ್ಯರನ್ನು ಬೇರೊಂದು ರೀತಿಯಲ್ಲಿ ಜನಸಾಮಾನ್ಯರು ನೋಡೋ ದೇ ಇಲ್ಲ. ಆದರೆ ಇವತ್ತು ನೂರಾರು ವೈಧ್ಯರನ್ನು ಜನಸಾಮಾನ್ಯರ ರೀತಿ ನೋಡಬಹುದಿತ್ತು. ವೈದ್ಯರ ದಿನಾಚರಣೆಯ ಪ್ರಯುಕ್ತ ವೈದ್ಯರು ಕೆಆರ್ ಪುರದ ಪ್ರಮುಖ ರಸ್ತೆಗಳಲ್ಲಿ ಕಿಡ್ನಿ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಾಕಥಾನ್ ಮಾಡಿದರು. ಇದೇ ಸಂಧರ್ಭದಲ್ಲಿ ವ್ಯಾಯಾಮ ಮಾಧರಿಯ ಡ್ಯಾನ್ಸ್ ಅನ್ನು ಪ್ರದರ್ಶಿಸಿದರು.ವೈದ್ಯರಿಗೆ ವ್ಯಾಯಾಮ ಮಾಧರಿಯ ಡ್ಯಾನ್ಸ್ ಹೇಳಿಕೊಡುತ್ತಿದ್ದ ವೈಧ್ಯೆಯ ಸ್ಟೆಪ್ಸ್ ಅಂತೂ ಬಹಳ ಇಂಪ್ರೆಸ್ಸಿವ್ ಆಗಿತ್ತು. ಇದೀಗ ವೈದ್ಯರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.