ತೆಲುಗಿನಲ್ಲಿ ಮಿಂಚಲಿದ್ದಾರೆ ಅಮರ ಮನದನ್ನೆ! ಟಾಲಿವುಡ್​ನಲ್ಲಿ ಸೈಂಟಿಸ್ಟ್​​​​​ ಆದ್ರು ಕನ್ನಡದ ಬಸಣ್ಣಿ!!

ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್ ಜತೆ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿ, ಜ್ಯೂನಿಯರ್​ ರೆಬೆಲ್​ಗೆ ಅಮರ್​ನಲ್ಲಿ ಜೋಡಿಯಾಗಿದ್ದ ಮಾದಕ ಚೆಲುವೆ  ತಾನ್ಯಾ ಹೋಪ್ ಟಾಲಿವುಡ್‌ ಗೆ ಜಿಗಿದಿದ್ದಾರೆ.

ad

ಸ್ಯಾಂಡಲ್​ವುಡ್​ನಲ್ಲಿ ಬಸಣ್ಣಿ ಹಾಡಿಗೆ ಸೊಂಟ ಬಳುಕಿಸುವ ಮೂಲಕ ಪಡ್ಡೆಗಳ ಹೃದಯ ಗೆದ್ದಿದ್ದ ಈಗ ಬೇಡಿಕೆ ಹೆಚ್ಚಿಸಿಕೊಂಡಿದ್ದು,  ಟಾಲಿವುಡ್‌ ನತ್ತ ಮುಖ ಮಾಡಿದ್ದಾರೆ.ತೆಲುಗಿನ ಸೂಪರ್ ಹಿರೋ ರವಿತೇಜ ನಟನೆಯ ‘ಡಿಸ್ಕೋ ರಾಜ’ ಚಿತ್ರದಲ್ಲಿ ಸೈಂಟಿಸ್ಟ್ ಪಾತ್ರದಲ್ಲಿ ತಾನ್ಯಾ ಹೋಪ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಇದೇ ಚಿತ್ರದಲ್ಲಿ ಮತ್ತೊರ್ವ ಕನ್ನಡತಿ ನಭಾನಟೇಶ್ ನಟಿಸುತ್ತಿದ್ದಾರೆ.ಒಟ್ಟು ಮೂವರು ನಾಯಕಿಯರು ಚಿತ್ರದಲ್ಲಿದ್ದಾರೆ.  ಇಬ್ಬರು ಕನ್ನಡದವರೇ ಎಂಬುದು ವಿಶೇಷವಾಗಿದ್ದು .‘ಅಮರ್’, ‘ಯಜಮಾನ’ ಚಿತ್ರಗಳ ನಂತರ ಚಿರಂಜೀವಿ ಸರ್ಜಾ ಜತೆಗೆ ‘ಖಾಕಿ’ ಚಿತ್ರಕ್ಕೂ ನಾಯಕಿ ಆಗಿದ್ದಾರೆ.

ಒಟ್ಟಿನಲ್ಲಿ, ಅಭಿಷೇಕ್ ನಾಯಕತ್ವದ ಚೊಚ್ಚಲು ಚಿತ್ರವಾದ ‘ಅಮರ್’ಗೆ ಚಿತ್ರದಲ್ಲಿ ನಟಿಸಿದ ನಂತರ ಟಾಲಿವುಡ್ ನಟಿಸುತ್ತಿರುವುದು ಆಭಿಮಾನಿಗಳಿಗೆ ಖುಷಿ ತಂದಿದೆ.