ಅತಿ ಶೀಘ್ರದಲ್ಲಿ ನಿಮಗೆ ಸಿಗಲಿದೆ ಫಾರಿನ್ ಮರಳು.!!

Import of Sand from Malaysia raises hope.
Import of Sand from Malaysia raises hope.

ರಾಜ್ಯಕ್ಕೆ ಫಾರಿನ್ ಮರಳಿನ ಭಾಗ್ಯ !!

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತಾರೆ. ನಿಜ.. ಮನೆ ಕಟ್ಟುವುದು ಸುಲಭದ ಮಾತಲ್ಲ. ಇತಿಚೆಗೆ ಮನೆ ಕಟ್ಟುವವರಿಗೆ ಮರಳಿನದ್ದೇ ಚಿಂತೆ. ನದಿಯ ಮರಳು ಅತಿ ದುಬಾರಿ, ಫಿಲ್ಟರ್ಡ್ ಮರಳು ಕಡಿಮೆ ಬೆಲೆಗೆ ಸಿಕ್ಕರೂ ಅದು ಪ್ರಯೀಜನವಿಲ್ಲ. ಇನ್ನು ಸರ್ಕಾರ -M-sand  ಬಳಸಿ ಅಂತ ಪ್ರೋತ್ಸಾಹಿಸ್ತಿದೆ.  ಈಗ ಅದೆಲ್ಲಕ್ಕೂ ಮಿಗಿಲಾಗಿ ಯಾಜ್ಯ ಸರಕಾರ ಮರಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ನಿಜ. ರಾಜ್ಯದ ಜನರೇ ಇನ್ಮುಂದೆ ಮರಳಿನ ಚಿಂತೆ ಬಿಡಿ, ಮರಳು ಸಿಗ್ತಿಲ್ಲ,ದುಬಾರಿ ಅನ್ನೋ ಆತಂಕ ಬೇಡ, ಕಡೆಗೂ ರಾಜ್ಯಕ್ಕೆ ಬಂದಿದೆ ಫಾರಿನ್​​ ಮರಳು. ರಾಜ್ಯದ MSIL​ ಸಂಸ್ಥೆಯಿಂದ ಮುಂದಿನವಾರ ಮೊದಲ ಮರಳಿನ ಮೂಟೆ ವಿತರಣೆ ಆಗಲಿದೆ
ಈ ಮರಳಿನ ಮೂಟೆ ಹೇಗಿದೆ? ಎಷ್ಟು ತೂಕದ್ದು, ಬೆಲೆ ಎಷ್ಟು?

 

ಕಡೆಗೂ ರಾಜ್ಯಕ್ಕೆ ಬಂದಿದೆ ಫಾರಿನ್​​ ಮರಳು,  ಜಿಎಸ್​ಟಿ ಸೇರಿ ಒಂದು ಚೀಲ ಮರಳಿನ ಬೆಲೆ 190

 

ಕಡೆಗೂ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ ಫಾರಿನ್​​ ಮರಳು ಬರ್ತಾ ಇದೆ. ಪ್ರತಿ ಎಂಎಸ್​ಐಎಲ್​​ ಮೂಟೆ 50 ಕೆಜಿ ತೂಕದ್ದಾಗಿದ್ದು ಜಿಎಸ್​ಟಿ ಸೇರಿ ಒಂದು ಚೀಲ ಮರಳಿನ ಬೆಲೆ 190 ರೂಪಾಯಿ ಆಗಲಿದೆ.  ಫೋನ್ ಮಾಡಿದ್ರೆ, ಆನ್​ಲೈನ್ ಬುಕ್ ಮಾಡಿದ್ರೆ ಸಾಕು, ಮನೆ ಮುಂದೆ ಬಂದು ಬಿಳುತ್ತೆ ಮರಳಿನ ಮೂಟೆ. ಇದಕ್ಕಾಗಿ ಮುಂಗಡವಾಗಿ ನಾವು ಹಣ ಕೊಟ್ಟು ಕಾಯ್ದಿರಿಸಬೇಕು. ರಾಜ್ಯ ಸರ್ಕಾರದಿಂದ ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳಲಾಗ್ತಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ವಿದೇಶಿ ಮರಳು ಆಮದು ಮಾಡಿಕೊಳ್ತಿರುವ ರಾಜ್ಯ ನಮ್ಮದಾಗಿದೆ.

ಮಲೇಷ್ಯಾದಿಂದ ರಾಜ್ಯಕ್ಕೆ 54 ಸಾವಿರ ಟನ್ ಮರಳು ಹೊತ್ತ ಹಡಗು ಆಂಧ್ರದ ಕೃಷ್ಣಪಟ್ಟಿಣಂ ಖಾಸಗಿ ಬಂದರು ತಲುಪಿ, ಮರಳು
ಚೀಲಗಳಿಗೆ ಮರಳು ತುಂಬಿಸುವ ಪ್ರಕ್ರಿಯೆ ಬಹುತೇಕ ಅಂತ್ಯಗೊಂಡಿದೆ. ಅಲ್ಲಿಂದ ಅದು ದೊಡ್ಡಬಳ್ಳಾಪುರ, ಬಿಡದಿ ತಲುಪಲಿದೆ.