ಕುಡಿಯುವ ನೀರು ಕೇಳಿದ್ದಕ್ಕೆ ನಡೆದಿದ್ದು ಲಾಠಿಚಾರ್ಜ್! ಶಾಸಕರ ವಿರುದ್ಧ ಭುಗಿಲೆದ್ದ ಆಕ್ರೋಶ!!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವ್ಯಾಪಿಸಿರುವ ಬರಗಾಲ ಕುಡಿಯುವ ನೀರಿನ ಸಮಸ್ಯೆ ಅಲ್ಲದೆ ಗ್ರಾಮಸ್ಥರ ಸಹಜ ಜೀವನದ ಪರಿಸ್ಥಿತಿಯು ಹದಗೆಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮದಲ್ಲಿ ನೀರಿನ ಅಭಾವ ಉಂಟಾಗಿರುವುದು ಇದೆ ಮೊದಲೇನಲ್ಲ , ಪ್ರತಿ ಬೇಸಿಗೆಯಲ್ಲೂ ಚಿಕ್ಕಬಳ್ಳಾಪುರ ಗ್ರಾಮಸ್ಥರು ನೀರಿಗಾಗಿ ಶಾಸಕರ ಮೊರೆ ಹೋಗಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಿಕೊಳ್ಳುತ್ತಿದ್ದರು. ಆದರೆ ಈ ಭಾರೀ ಕುಡಿಯಲು ನೀರು ಕೇಳಿದ್ದಕ್ಕೆ ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ ಜಿಲ್ಲಾಡಳಿತದ ಅಧಿಕಾರಿಗಳು. ​

ad

ಮಂಚೇನಹಳ್ಳಿ ಗ್ರಾಮಸ್ಥರು ಕುಡಿಯಲು ನೀರು ಕೇಳಿ ಗ್ರಾಮ ಪಂಚಾಯ್ತಿ ಎದುರು ಪ್ರತಿ ಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಪತಿಭಟನೆಯನ್ನು ನಿಯಂತ್ರಣ ಗೊಳಿಸುವ ಸಲುವಾಗಿ ಮನಸೋ ಇಚ್ಛೆ ಲಾಠಿ ಚಾರ್ಜ್​ ಮಾಡಿದ್ದಾರೆ. ಇದರಿಂದಾಗಿ ನಾಲ್ವರಿಗೆ ಗಾಯವಾಗಿದ್ದು, ಕರ್ತವ್ಯ ಮರೆತು ನೀರು ಕೇಳಿದವರ ಮೇಲೆಯೇ ದರ್ಪ ತೋರಿದ ಜಿಲ್ಲಾಡಳಿತದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಕುಡಿಯುವ ನೀರು ಪೂರೈಸುವ ಯೋಗ್ಯತೆ ಇಲ್ವಾ..? ನೀರಿಗಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಮನಸೋ ಇಚ್ಛೇ ಲಾಠಿ ಪ್ರಹಾರ ಮಾಡಿದ್ದೀರಿ., ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸೋದು ಜಿಲ್ಲಾಡಳಿತದ ಕರ್ತವ್ಯ ., ನೀರು ಪೂರೈಸದೇ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿಸುತ್ತಿದೆ ಜಿಲ್ಲಾಡಳಿತ .,  ಗ್ರಾಮದಲ್ಲಿ ತಮ್ಮ ಜವಾಬ್ದಾರಿ ಮರೆತು ಶಾಸಕರು ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಎಂದು ಜಿಲ್ಲಾಡಳಿತದ ವಿರುದ್ಧ ಮಂಚೇನಹಳ್ಳಿಯಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.