ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ​ ಪಂದ್ಯದಲ್ಲಿ ಟಾಸ್​​ ಗೆದ್ದ ಶ್ರೀಲಂಕಾ ಫಿಲ್ಡೀಂಗ್​​ ಆಯ್ಕೆ.

ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಭಾರತ ಹಾಗು ಶ್ರೀಲಂಕಾ ಇಂದು ಮತ್ತೆ ಮುಖಾಮುಖಿಯಾಗುತ್ತಿದೆ. 3 ಏಕದಿನ ಪಂದ್ಯದ ಸರಣಿ ಇಂದಿನಿಂದ ಆರಂಭವಾಗಿದೆ. ಈ ಹಿಂದೆ ಧರ್ಮಶಾಲಾ ಮೈದಾನದಲ್ಲಿ ನಡೆದ 3 ಏಕದಿನ ಪಂದ್ಯಗಳ ಪೈಕಿ ಟೀಮ್​ಇಂಡಿಯಾ 2ರಲ್ಲಿ ಜಯಸಾಧಿಸಿದೆ. ವಿರಾಟ್ ಕೊಹ್ಲಿ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ರೋಹಿತ್ ಶರ್ಮಾ ಟೀಮ್​ಇಂಡಿಯಾವನ್ನ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿರುವ ಲಂಕಾ ತಂಡ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಇಲ್ಲಿಯವರೆಗೆ ಉಭಯ ತಂಡಗಳು 155 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 88 ಪಂದ್ಯಗಳಲ್ಲಿ ಟೀಂ ಇಂಡಿಯಾ ಮತ್ತು 55 ಪಂದ್ಯಗಳಲ್ಲಿ ಲಂಕಾ ಗೆಲುವು ಸಾಧಿಸಿದೆ.

ನಂ.1 ಪಟ್ಟದ ಮೇಲೆ ಕಣ್ಣಿಟ್ಟ ಟೀಮ್​ಇಂಡಿಯಾ

ಱಂಕಿಂಗ್​ ದೃಷ್ಟಿಯಿಂದ ಲಂಕಾ ವಿರುದ್ಧದ ಏಕದಿನ ಸರಣಿ ಟೀಮ್​ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಏಕದಿನ ಱಂಕಿಂಗ್​ ಪಟ್ಟಿಯಲ್ಲಿ 120 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಟೀಮ್​ಇಂಡಿಯಾ ಇದೀಗ ನಂಬರ್​ 1 ಪಟ್ಟದ ಮೇಲೆ ಕಣ್ಣಿಟ್ಟಿದೆ. ಸಧ್ಯ ಏಕದಿನ ಱಂಕಿಂಗ್​ ಪಟ್ಟಿಯಲ್ಲಿ ತಲಾ 120 ಅಂಕಗಳೊಂದಿಗೆ ಸೌತ್​ಆಫ್ರಿಕಾ ಹಾಗೂ ಟೀಮ್​ಇಂಡಿಯಾ ಕ್ರಮವಾಗಿ 1 ಮತ್ತು 2 ನೇ ಸ್ಥಾನದಲ್ಲಿವೆ. ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯವನ್ನು ಗೆದ್ದರೆ ಭಾರತ, ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ನಂಬರ್​ 1 ಸ್ಥಾನಕ್ಕೆ ಏರಲಿದೆ. ಆದರೆ ಇದೇ ಸ್ಥಾನದಲ್ಲಿ ಉಳಿಯಬೇಕಾದರೆ ಭಾರತ 3-0 ಅಂತರದಿಂದ ಸರಣಿ ವಶಪಡಿಸಿಕೊಳ್ಳಬೇಕಿದೆ.

 

From the web

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here