ಕ್ರಿಕೆಟಿಗ್​​ ರವೀಂದ್ರ ಜಡೇಜಾ ಮನೆಯಲ್ಲೇ ಇದೆ ಎರಡು ಪಾರ್ಟಿ! ಇಬ್ಬರು ಕಾಂಗ್ರೆಸ್​, ಮತ್ತಿಬ್ಬರು ಬಿಜೆಪಿ!!

ಭಾರತದ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಆದರೆ ಜಡೇಜಾ ಬಿಜೆಪಿ ಬೆಂಬಲಿಸಿದ ಮಾತ್ರಕ್ಕೆ ಅವರ ಮನೆಯ ಸದಸ್ಯರೆಲ್ಲರೂ ಬಿಜೆಪಿ ಬೆಂಬಲಿಸುತ್ತಾರೆ ಎಂದುಕೊಳ್ಳಬೇಡಿ. ಅವರ ಮನೆಯೊಂದರಲ್ಲೇ ಕಾಂಗ್ರೆಸ್​ ಬೆಂಬಲಿಗರು ಹಾಗೂ ಬಿಜೆಪಿ ಬೆಂಬಲಿಗರು ಇದ್ದಾರಂತೆ.

ad

ಹೌದು ರವೀಂದ್ರ ಜಡೇಜಾ  ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೊಂಡ ಬೆನ್ನಲ್ಲೇ ಜಡೇಜಾ ತಂದೆ ಅನಿರುದ್ಧ್ ಸಿನ್ಹ್ ಮತ್ತು ಅಕ್ಕ ನಾಯ್ನಬಾ ಜಡೇಜಾ ಭಾನುವಾರ ಜಾಮ್ನಗರ್ ಜಿಲ್ಲೆಯ ಕಲಾವಾದ್ ಪಟ್ಟಣದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ ಇದೇ  3ರಂದೇ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಸೇರ್ಪಡೆಯಾಗಿದ್ದರು. ಸದ್ಯ ಜಡೇಜಾರವರ ಕುಟುಂಬದಲ್ಲಿಯೇ 2 ಪಕ್ಷಗಳಿದೆ. ಈ ಎರಡು ಪಕ್ಷಗಳಲ್ಲಿ ಜಡೇಜಾರವರು ಪತ್ನಿ ಪರ ವಾಲಿದ್ದಾರೆ.

ಅಪ್ಪ ಮತ್ತು ಅಕ್ಕ ಕಾಂಗ್ರೆಸ್ ಸೇರ್ಪಡೆಯಾದ ಮರುದಿನವೇ ಅವರು ತಮ್ಮ ರಾಜಕೀಯ ನಿಲುವನ್ನು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಡೇಜಾ ದಂಪತಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ನಂತರ ಪತಿ ರವೀಂದ್ರ ಜಡೇಜಾ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಅನೌಪಚಾರಿಕವಾಗಿಯೂ ಭೇಟಿಯಾಗಿದ್ದೆ ಅಂದಿನಿಂದ ಅವರ ಪ್ರಭಾವಕ್ಕೆ ಒಳಾಗಾಗಿರುವುದಾಗಿ ಜಡೇಜಾ ಪತ್ನಿ ರಿವಾಬಾ ಹೇಳಿದರು.

ರವೀಂದ್ರ ಜಡೇಜಾ ಅವರ ತಾಯಿ 15 ವರ್ಷಗಳ ಹಿಂದೆಯೇ ತೀರಿಕೊಂಡರು. ಮನೆಗೆ ಹಿರಿಯ ಮಗಳಾದ ನಾಯ್ನಬಾ ಕುಟುಂಬ ನಿರ್ವಹಣೆಯ ಜೊತೆಗೆ, ತಮ್ಮ ಕ್ರಿಕೆಟ್ ಆಟಗಾರನಾಗುವ ಬಯಕೆಗೆ ಬೆಂಬಲ ನೀಡಿದರು. ಗಂಭೀರ್ ಸ್ಟಾಫ್ ನರ್ಸ್ ಆಗಿದ್ದ ನಾಯ್ನಬಾ ಜಡೇಜಾ ರಾಜ್ಯ ಸರ್ಕಾರದ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿದ್ದರು. ಮಹಿಳೆಯರು, ರೈತರು ಮತ್ತು ಯುವಜನರ ಹಕ್ಕುಗಳಿಗೆ ಕಾಂಗ್ರೆಸ್ ಹೋರಾಡುತ್ತಿರುವುದರಿಂದ ಅದನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಅವರು ರಾಜಕೋಟ್‌ ನಗರದಲ್ಲಿ ಅವರ ಕುಟುಂಬ ನಡೆಸುತ್ತಿರುವ ರೆಸ್ಟೋರೆಂಟ್ ಒಂದನ್ನು ನೋಡಿಕೊಳ್ಳುತ್ತಿದ್ದಾರೆ.

 

ಬಿಜೆಪಿಗೆ ಬೆಂಬಲ ‘ನಾನು ಬಿಜೆಪಿಯನ್ನು ಬೆಂಬಲಿಸುತ್ತೇನೆ. @ನರೇಂದ್ರ ಮೋದಿ #ರಿವಾಬಾ ಜಡೇಜಾ ಜೈ ಹಿಂದ್’ ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಸೋಮವಾರ ಟ್ವೀಟ್ ಮಾಡಿದ್ದಾರೆ.ಕ್ರಿಕೆಟರ್ ರವೀಂದ್ರ ಜಡೇಜ ಪತ್ನಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ರ್ ನಲ್ಲಿ ಜಡೇಜಾಗೆ ಧನ್ಯವಾದ ತಿಳಿಸುವ ಮೂಲಕ ಪ್ರತಿಕ್ರಿಯೆ ನೀಡಿದರು. ಜೊತೆಗೆ 2019ರ ವಿಶ್ವಕಪ್‌ ಟೂರ್ನಿಯ ಭಾರತೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.