ಆ ಕ್ರಿಕೆಟಿಗನ್ ಪತ್ನಿ ಆರೆಸ್ಟ್ ಆಗಿದ್ದೇಕೆ? ಆಕೆ ಪತಿ ಮೇಲೆ ಮಾಡ್ತಿರೋ ಆರೋಪಗಳೇನು ಗೊತ್ತಾ?

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಎಂದೆ ಪ್ರಸಿದ್ಧವಾಗಿರುವ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ರನ್ನು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸೋಮವಾರ ಉತ್ತರ ಪ್ರದೇಶದ ಅಮ್ರೊಹಾ ಪೊಲೀಸರು ಬಂಧಿಸಿದ್ದಾರೆ. ನಂತರ ಜಾಮೀನಿನ ಆಧಾರದ ಮೇಲೆ ಹಸೀನ್ ರನ್ನು ಬಿಡುಗಡೆ ಮಾಡಲಾಗಿದೆ.

ad

ಕೌಟುಂಬಿಕ ಕಲಹ ಹಿನ್ನೆಲೆ ಕೆಲವು ತಿಂಗಳ ಹಿಂದೆ ಹಸೀನ್‌ ಜಹಾನ್‌ ರವರು ಪತಿ ಮೊಹಮ್ಮದ್ ಶಮಿ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದರು. ಭಾನುವಾರ ಅಮ್ರೊಹಾದ ಶಾಸ್ಪುರ್‌ ಅಲಿ ಗ್ರಾಮದಲ್ಲಿರುವ ಶಮಿ ಅವರ ನಿವಾಸಕ್ಕೆ ತೆರಳಿದ ಹಸೀನ್‌ ಜಹಾನ್‌ ರಂಪ-ರಾದ್ದಾಂತ ಮಾಡಿದ್ದಾರೆ. ಈ ವಿಚಾರವಾಗಿ ಹಸೀನ್ ರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹಸೀನ್‌ ಜಹಾನ್‌, “ನನ್ನ ಪತಿಯ ಮನೆಗೆ ಬಂದಿದ್ದೇನೆ. ಇಲ್ಲಿ ಇರಲು ನನಗೆ ಎಲ್ಲಾ ರೀತಿಯ ಹಕ್ಕು ನನಗಿದೆ. ಆದರೆ, ನನ್ನ ಪತಿಗೆ ಅನೈತಿಕ ಸಂಬಂಧಗಳಿದ್ದು ತಮಗೆ ಮೋಸ ಮಾಡಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಹಾಗೂ ನನ್ನ ಪತಿಯ ಸೋದರರು ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇನ್ನೂ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ಬದಲಾಗಿ ನನ್ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಎಂದು ಆರೋಪಿಸಿದರು.

ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ಬಲಗೈ ವೇಗಿ ಶಮಿ, ತಮ್ಮ ವೃತ್ತಿಬದುಕಿಗೆ ತೊಡಕುಂಟುಮಾಡುವ ದುರುದ್ದೇಶದಿಂದ ಈ ಪಿತೂರಿ ಮಾಡಲಾಗಿದೆ ಎಂದು ಹೇಳಿದ್ದರು. 29 ವರ್ಷದ ವೇಗದ ಬೌಲರ್‌ ಮೊಹಮ್ಮದ್ ಶಮಿ ಸದ್ಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಪಂದ್ಯಗಳಲ್ಲಿ ಬ್ಯುಸಿಯಾಗಿದ್ದು, ಟಿ20 ಟೂರ್ನಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಪರ ಆಟವಾಡುತ್ತಿದ್ದಾರೆ. ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ.