ನಮ್ಮ ಕ್ರೀಡೆಯನ್ನು ಉಳಿಸಿಕೊಡಿ! ಚಾಲೆಂಜಿಂಗ್ ಸ್ಟಾರ್ ಬಳಿ ಮೊರೆ ಹೋದ ಅಂತಾರಾಷ್ಟ್ರೀಯ ಆಟಗಾರ್ತಿ!!

ಸದಾ ಕಷ್ಟದಲ್ಲಿರುವವ ಸಹಾಯಕ್ಕೆ ಧಾವಿಸುವ ದರ್ಶನ್​ ತಾವು ಸಹಾಯ ನೀಡಿದ್ದನ್ನು ಗುಟ್ಟಾಗಿ ಕಾಪಾಡಿಕೊಳ್ಳುತ್ತಾರೆ. ಅಭಿಮಾನಿಗಳು, ಸಹಕಲಾವಿದರು ಹೀಗೆ ಎಲ್ಲರ ರಕ್ಷಣೆಯಲ್ಲೂ ದರ್ಶನ ಸದಾ ಮುಂದು. ಹೀಗೆ ಸಾಮಾಜಿಕ ಚಟುವಟಿಕೆ ಮೂಲಕ ಗುರುತಿಸಿಕೊಂಡ ನಟ ದರ್ಶನ್​ಗೆ  ಕರ್ನಾಟಕದ ಮಹಿಳಾ ಥ್ರೋ ಬಾಲ್​ ತಂಡದ ನಾಯಕಿ ಕೃಪಾ ಸಹಾಯದ ಕೋರಿಕೆ ಸಲ್ಲಿಸಿದ್ದಾರೆ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ದರ್ಶನ್ ಅವರ ಮನೋಭಾವನ್ನು ನೋಡಿದ ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿ ಕೃಪಾ “ಥ್ರೋಬಾಲ್ ಆಟ ನಾನಾಕಾರಣಗಳಿಗೆ ಖ್ಯಾತಿ ಪಡೆದುಕೊಂಡಿಲ್ಲ. ಆದ್ರೆ ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಕ ಮಹಿಳಾ ಆಟಗಾರರು ಇದ್ದಾರೆ. ಚಿಕ್ಕ ಚಿಕ್ಕ ಗ್ರಾಮಗಳಿಂದ ಬಂದಿದ್ದಾರೆ. ಅನೇಕ ಆಟಗಾರರು ಥ್ರೋಬಾಲ್ ನಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಥ್ರೋಬಾಲ್ ಅಷ್ಟು ಪ್ರಖ್ಯಾತಿ ಪಡಿದುಕೊಂಡಿಲ್ಲ”

“ಪ್ರಖ್ಯಾತಿ ಪಡೆಯದ ಥ್ರೋಬಾಲ್ ಆಟ ಖ್ಯಾತಿ ಗಳಿಸಬೇಕು ಅಂದ್ರೆ ಕರ್ನಾಟಕದ ಶಕ್ತಿ ಆಗಿರುವ ದರ್ಶನ್ ಅಂತಹ ಸ್ಟಾರ್ ನಟರ ಸಹಾಯ ಬೇಕು. ಥ್ರೋಬಾಲ್ ಮಹಿಳಾ ತಂಡಕ್ಕೆ ಪ್ರೋತ್ಸಹ ನೀಡಿದ್ರೆ ಥ್ರೋಬಾಲ್ ಆಟ ಕೂಡ ಖ್ಯಾತಿ ಗಳಿಸುತ್ತೆ. ಅನೇಕ ಕ್ರೀಡಾಪಟುಗಳಿಗೂ ಸಹಾಯವಾಗುತ್ತೆ. ದಯವಿಟ್ಟು ಸಹಾಯ ಮಾಡಿ, ಆಟವನ್ನು ಬೆಂಬಲಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಕೃಪಾ ದರ್ಶನ್ ಅವರ ದೊಡ್ಡ ಅಭಿಮಾನಿ. ದರ್ಶನ್ ಅವರನ್ನು ಸದಾ ಫಾಲೋಮಾಡುತ್ತಿರುವ ಈಕೆ ಡಿ ಬಾಸ್ ಥ್ರೋಬಾಲ್ ಆಟಕ್ಕೂ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಕ್ರಿಕೆಟ್​ ಸೇರಿದಂತೆ ಹಲವು ಬಗೆಯ ಕ್ರೀಡೆಗಳಿಗೆ ಸಹಾಯ ಹಸ್ತ ಚಾಚಿರುವ ದಚ್ಚು ಥ್ರೋ ಬಾಲ್​​ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾರಾ? ಇದರಿಂದ ಕೃಪಾ ಅವರ ಆಶಯ ಈಡೇರುತ್ತಾ ಕಾದು ನೋಡಬೇಕಿದೆ. ್