ಇದು ಅಕ್ಷರಶಃ ಅಮಾನವೀಯ ಘಟನೆ.. ಹೊತ್ತು ಹೆತ್ತ ತಾಯಿಗೆ ಮಕ್ಕಳು ಮಾಡಿದ ಮಹಾನ್ ಕ್ರೂರತನ.. ಮನೆ ತುಂಬ ಮಕ್ಕಳು, ಸೊಸೆಯರು, ಮೊಮ್ಮಕ್ಕಳಿದ್ರೂ ವೃದ್ದ ತಾಯಿಯೊಬ್ರು ಬೀದಿಪಾಲಾಗಿದ್ದಾರೆ. ಯಾರೂ ವಾಸವಿರದ ಕೋಣೆಯಲ್ಲಿ ಅನಾಥ ಸ್ಥಿತಿಯಲ್ಲಿ, ಊಟ,ಉಪಚಾರವಿಲ್ಲದೇ ಮಲಗಿದ್ದ ವೃದ್ದೆಯೊಬ್ಬಳನ್ನು ಹಾವೇರಿಯ ಸಾರ್ವಜನಿಕರು ಹಾಗೂ ಮಹಿಳಾ ಸಂಘಟನೆಯವರು ರಕ್ಷಸಿದ್ದಾರೆ. ಈಜಾರಿ ಲಕಮಾಪುರದ ಇಂದಿರಾನಗರದಲ್ಲಿ ಬಸಮ್ಮ ದ್ಯಾಮಣ್ಣ ಲಚಮಕ್ಕನವರ್ ಅನ್ನೋರನ್ನು ಮಕ್ಕಳೇ ನಿರ್ಲಕ್ಷ್ಯ ಮಾಡಿದ್ದರು. ಈಕೆಗೆ ಸುಮಾರು 90 ವರ್ಷವಾಗಿದ್ರೂ ಕೋಣೆಯೊಂದ್ರಲ್ಲಿ ಅನ್ನ-ನೀರಿಲ್ಲದೇ ಕೂಡಲಾಗಿತ್ತು. ದಿಕ್ಕಿಲ್ಲದೇ ಮಲಗಿದ್ದ ಈಕೆಯನ್ನು ಇರುವೆಗಳು ಮುತ್ತಿದ್ದವು. ಈ ವಿಚಾರ ತಿಳಿದ ಮಹಿಳಾ ಸಂಘಟನೆಯವರು ಮನೆಗೆ ಹೋಗಿ ವೃದ್ಧೆಯನ್ನು ಹೊರತಂದು ದೇವಸ್ಥಾನದ ಕಟ್ಟೆಯ ಮೇಲೆ ಮಲಗಿಸಿದ್ದರು. ಅಲ್ಲದೇ ಮಕ್ಕಳ ಮನೆಗೆ ಹೋಗಿ ತರಾಟೆಗೆ ತಗೆದುಕೊಂಡಿದ್ರು. ಆದ್ರೆ ಮಕ್ಕಳು ಮನೇಲಿ ಇರ್ಲಿಲ್ಲ. ಮೊಮ್ಮಕ್ಕಳು ಸಂಘಟನೆಯವರ ಮೇಲೆ ವಾಗ್ವಾದ ನಡೆಸಿದ್ದರು. ಕೊನೆಗೆ ಸಾರ್ವಜನಿಕರೇ ವೃದ್ಧೆಯನ್ನು ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
=============
ಬೈಟ್; ದ್ಯಾಮವ್ವ, ಮಹಿಳಾ ಸಂಘದ ಸದಸ್ಯೆ
ಬೈಟ್; ಶಫೀ ಪಠಾಣ್, 108 ಚಾಲಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here