ಕೆಂಪೇಗೌಡರಿಗೆ ಅಪಮಾನ !! ಪ್ರತಿಮೆ ಉದ್ಘಾಟಿಸಿ ಸಂಕಷ್ಟಕ್ಕೆ ಸಿಲುಕಿದ್ರಾ ಸಿಎಂ?

Insulting On statue of Nadaprabhu Kempe Gowda.

ಚುನಾವಣೆಯ ಎದುರಿನಲ್ಲೇ ನಗರದಲ್ಲಿ ಸುಂದರ ಬೆಂಗಳೂರು ನಗರದ ನಿರ್ಮಾತೃರಾದ ಕೆಂಪೆಗೌಡರಿಗೆ ಅವಮಾನ ಮಾಡಲಾಯ್ತಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದೆ ಕೆಂಪೆಗೌಡರ್ ಪುತ್ಥಳಿ ಅನಾವರಣ ಕಾರ್ಯಕ್ರಮ. ಹೌದು ಕೆಂಪೇಗೌಡ್​ ಪುತ್ಥಳಿ ನಿರ್ಮಿಸಿರೋ ಪಾರ್ಕ್​ ಅನೈತಿಕ ಚಟುವಟಿಕೆಗಳ ಗೂಡಾಗಿದ್ದು, ಸಿಎಂ ಎಲೆಕ್ಷನ್​ಗಾಗಿ ಈ ಉದ್ಘಾಟನೆ ಕಾರ್ಯ ನೆರವೇರಿಸಿದ್ರಾ ಅನ್ನೋ ಅನುಮಾನ ಮೂಡಿದೆ.

ಹೌದು ಹೆಬ್ಬಾಳ ಜಂಕ್ಷನ್​​ನ ಕಗ್ಗತ್ತಲ ಕಾಡಿನಲ್ಲಿ ಕೆಂಪೆಗೌಡರ್ ಪುತ್ಥಳಿ ಅನಾವರಣ ಮಾಡಲಾಗಿದೆ. ಆದರೇ ಈ ಪಾರ್ಕ್ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಇಲ್ಲಿ ಕಾಂಡೋಂ ರಾಶಿ , ಮದ್ಯದ ಬಾಟಲಿಗಳ ನಡುವೆಯೇ ಪ್ರತಿಮೆ ಉದ್ಘಾಟಿಸಲಾಗಿದೆ. ಅಷ್ಟೇ ಅಲ್ಲ, ಕಾಮಗಾರಿ ಮುಗಿಯುವ ಮುನ್ನವೇ ಪ್ರತಿಮೆ ಉದ್ಘಾಟಿಸಲಾಗಿದ್ದು, ಬೆಂಗಳೂರಿರನ್ನು ಸೆಳೆಯಲು ಹೋಗಿ ಸರ್ಕಾರ ಈ ಎಡವಟ್ಟು ಮಾಡಿದ್ಯಾ ಎಂಬ ಅನುಮಾನ ಮೂಡಿದೆ.  ಇನ್ನು ಅಂದಾಜು 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕೆಂಪೇಗೌಡರ್ ಪುತ್ಥಳಿ ಅನಾವರಣಗೊಳಿಸಲಾಗಿದ್ದು, ಪುತ್ಥಳಿ ಸುತ್ತ ಒಂದೇ ಒಂದು ವಿದ್ಯುತ್ ದೀಪವನ್ನು ಹಾಕಲಾಗಿಲ್ಲ. ಅಷ್ಟೇ ಅಲ್ಲ ಪಾರ್ಕ್​​ ನ್ನು ಸ್ವಚ್ಛಗೊಳಿಸಲಾಗಿಲ್ಲ. ಇದು ಒಕ್ಕಲಿಗರ ಸಿಎಂ ಮಾಡಿದ ಅವಮಾನ ಎಂದೇ ಪರಿಗಣಿಸಲಾಗುತ್ತಿದ್ದು, ಇದಕ್ಕಾಗಿ ಒಕ್ಕಲಿಗರು ಸಿಎಂ ವಿರುದ್ಧ ಅಸಮಧಾನಗೊಂಡಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here