ಪ್ರತ್ಯೇಕ ರಾಜ್ಯಕ್ಕೆ ತೀವ್ರಗೊಂಡ ಬೇಡಿಕೆ- ಸಹಿ ಸಂಗ್ರಹ ಅಭಿಯಾನಕ್ಕೆ ಸಜ್ಜು

 

ad

ಸಿಎಂ ಕುಮಾರಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಖಂಡಿಸಿ ಹುಟ್ಟಿಕೊಂಡಿದ್ದ ಪ್ರತ್ಯೇಕ ರಾಜ್ಯದ ಕೂಗು ತೀವ್ರಗೊಳ್ಳುವ ಮುನ್ಸೂಚನೆ ದೊರೆತಿದೆ. ಹೌದು ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಖಂಡಿಸಿ, ಪ್ರತ್ಯೇಕ ರಾಜ್ಯಕ್ಕೆ ರಾಜ್ಯ ಬೇಕೆಂದು ಕರೆ ನೀಡಿದ್ದ ಬಂದ್ ಬೆನ್ನಲ್ಲೆ, ಇದೀಗ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಮೊಳಗಿದೆ.

 

 

ಹೈದ್ರಬಾದ್ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಅಂತಾ ಮರುನಾಮಕರಣ ಮಾಡಿ, ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅಧ್ಯಕ್ಷ‌ ಎಮ್ ಎಸ್ ಪಾಟೀಲ್ ನೇತೃತ್ವದಲ್ಲಿ ನಗರದ ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ.

 


ಈ ಒಂದು ಸಹಿ ಸಂಗ್ರಹ ಅಭಿಯಾನದಲ್ಲಿ ನೂರಾರು ಜನರು ನಮಗೆ ಪ ಹೈ ಕ ಪ್ರತ್ಯೇಕ ರಾಜ್ಯ ಬೇಕೆ ಬೇಕು ಅಂತಾ ಸಹಿ ಮಾಡುತ್ತಿದ್ದಾರೆ. ಸಂವಿಧಾನದ ವಿಶೇಷ ಅಡಿಯಲ್ಲಿ ಹೈ ಕ ಭಾಗಕ್ಕೆ 371(ಜೆ) ಕಲಂ ಜಾರಿಯಾಗಿದೆ. ಹೀಗಾಗಿ ತೆಲಂಗಾಣ ಮಾದರಿಯಲ್ಲಿ ಹೈದ್ರಬಾದ್ ಕರ್ನಾಟಕವನ್ನ ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಬೇಕೆಂದು ಸಹಿ ಸಂಗ್ರಹ ಅಭಿಯಾನದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಲಿದ್ದಾರೆ..