ಶಶಿಕಲಾಗೆ ಅನಾರೋಗ್ಯ- ಇದೆಲ್ಲ ನಾಟಕ ಅಂದ್ರು ಐಪಿಎಸ್​ ರೂಪಾ!!

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಜ್ವರದಿಂದ ಬಳಲುತ್ತಿದ್ದಾರೆ.

ad


 ನಿನ್ನೆ ಬೆಳಗ್ಗೆಯಿಂದ ಶಶಿಕಲಾಗೆ ಜ್ವರ ಕಾಣಿಸಿಕೊಂಡಿದ್ದು, ಅವರಿಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಜೈಲಿನಲ್ಲಿ‌ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಗೆ ಅನಾರೋಗ್ಯ. ಜೈಲಿನಲ್ಲಿರುವ ಆಸ್ಪತ್ರೆಯ ಸ್ಪೆಶಲ್ ವಾರ್ಡ್​ನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕಾರಾಗೃಹದ ವೈದ್ಯೆ ಉಮಾ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಅಂಬುಲೆನ್ಸ್​ ಸಿದ್ದಪಡಿಸಿಕೊಳ್ಳಲಾಗಿದ್ದು, ಅಗತ್ಯ ಬಿದ್ದಲ್ಲಿ ಹೆಚ್ಚಿನ ಚಿಕಿತ್ಸೆ ಕರೆದೊಯ್ಯಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ.

 

ಇನ್ನು ಶಶಿಕಲಾ ಅನಾರೋಗ್ಯದ ವಿಚಾರ ಬಹಿರಂಗವಾಗುತ್ತಿದ್ದಂತೆ ಐಪಿಎಸ್​ ಅಧಿಕಾರಿ ಡಿ.ರೂಪಾ ಟ್ವಿಟ್​​ ಮಾಡಿದ್ದು, ಆರೋಗ್ಯ ನೆಪದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು. ಜೈಲಿನಲ್ಲಿ ಪ್ರಭಾವ ಬಳಸಿ ವಿಶೇಷ ವೈದ್ಯರ ಬಳಿಕ ಚಿಕಿತ್ಸೆ ಪಡೆಯಲು ಇಂತಹ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಹೈಫೈ ಎಸಿ ಇರುವ ಆಸ್ಪತ್ರೆಗೆ ಆಡ್ಮಿಟ್​ ಆಗ್ತಾರೆ. ಅಲ್ಲಿ ಯಾರನ್ನಾದರೂ ಬೇಕಾದರು ಭೇಟಿ ಮಾಡುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಅಲ್ಲದೇ ನಾನು ಜೈಲಾಧಿಕಾರಿಯಾಗಿದ್ದಾಗ ಜೈಲಿಗೆ ದಾಖಲಾಗುವ ಪ್ರತಿಯೊಬ್ಬ ಖೈದಿಗೆ ಮೊದಲ ದಿನವೇ ಎಲ್ಲಾ ರೀತಿಯ ಆರೋಗ್ಯ ತಪಾಸಣೆಮಾಡಬೇಕು. HIV & TB. ಮುಂತಾದ ಪರೀಕ್ಷೆ ಗಳು ಮಾಡಬೇಕು ಅಂತ ಸುತ್ತೂಲೆ ಹೊರಡಿಸಿದ್ದೆ. ಇದನ್ನು ಪಾಲಿಸಲಾಗುತ್ತಿಲ್ಲ. ಇನ್ನಾದರೂ ಪಾಲಿಸಬೇಕು ಎಂದಿದ್ದಾರೆ.