ಅಜಿತಾಬ್ ಮಿಸ್ಸಿಂಗ್ ಹಿಂದೆ ಇದೆಯಾ ಅನಾಮಿಕ ವ್ಯಕ್ತಿಯ ಕೈವಾಡ?

ಟೆಕ್ಕಿ ಅಜಿತಾಬ್ ಮಿಸ್ಸಿಂಗ್ ಕೇಸ್ ಪ್ರಕರಣಕ್ಕೆ ಸಂಬಂಧ ಸಿಐಡಿ ಆಧಿಕಾರಿಗಳು ಗೂಗಲ್‌ ಮೊರೆ ಹೋಗಲಿದ್ದಾರೆ . ಕಳೆದ ಆರು ತಿಂಗಳ ಹಿಂದೆ ವೈಟ್ ಫೀಲ್ಡ್ ನಲ್ಲಿ ಮಿಸ್ಸಿಂಗ್ ಆಗಿದ್ದ ಪಂಜಾಬ್ ಮೂಲದ ಟೆಕ್ಕಿ ಅಜಿತಾಬ್ ಇನ್ನೂ ನಾಪತ್ತೆ . ಯಾವುದೇ ಸುಳಿವು ಸಿಗದ ಹಿನ್ನಲೆ ಸಿ ಐ ಡಿ ತಂಡ ಕ್ಯಾಲಿಫೊರ್ನಿಯಾದ ಗೂಗಲ್ ಕಚೇರಿಗೆ ಪತ್ರ ಬರೆಯಲಿದ್ದಾರೆ . ಈ ಹಿಂದೆಯೂ ವೈಟ್ ಫೀಲ್ಡ್ ಪೊಲೀಸ್ರು ಗೂಗಲ್ ಮುಖ್ಯ ಕಚೇರಿಗೆ ಪತ್ರ ಬರೆದಿದ್ದರು ಆದ್ರೆ ಗೂಗಲ್ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇನ್ನು ಅಜಿತಾಬ್ ಶಂಕಿತ ವ್ಯಕ್ತಿಯೊಬ್ಬನೊಂದಿಗೆ ಚಾಟ್ ಮಾಡುತ್ತಿದ್ದ. ಆದ್ರೆ ನಾಪತ್ತೆಗೂ ಮೊದಲು ಆ ವ್ಯಕ್ತಿಯೊಂದಿಗೆ ಚಾಟ್ ಮಾಡುವುದನ್ನು ನಿಲ್ಲಿಸಿದ್ದ.ಹೀಗಾಗಿ ಆ ಶಂಕಿತ ವ್ಯಕ್ತಿಯೇ ಅಜಿತಾಬ್ ಕಣ್ಮರೆಯ ಹಿಂದೆ ಇರಬಹುದು ಎನ್ನುವ ಅನುಮಾನಗಳಿವೆ . ಇನ್ನು ಈಗ ಪ್ರಕರಣ ಸಿಐಡಿಗೆ ಪ್ರಕರಣ ವರ್ಗಾವಣೆಯಾದ ಬಳಿಕ ಮತ್ತೊಮ್ಮೆ ಕ್ಯಾಲಿಫೋರ್ನಿಯಾಗೆ ಪತ್ರ ಬರೆದಿದ್ದಾರೆ .ಇನ್ನು ಶಂಕಿತ ಆರೋಪಿಯ ಪ್ರೋಟೋಕಾಲ್ ಮಾಹಿತಿಯನ್ನ ಸಿಐಡಿ ಕೇಳಲಿದೆ. ಈ ಹಿಂದೆ ಕೋಲಾರದ ಅಂಗಡಿಯೊಂದರಲ್ಲಿ ಶಂಕಿತ ವ್ಯಕ್ತಿ ನಕಲಿ ದಾಖಲೆ ಕೊಟ್ಟು ಸಿಮ್ ಪಡೆದಿದ್ದ. ಇನ್ನು ಅಜಿತಾಬ್ ಕಣ್ಮರೆಯಾದ ಬಳಿಕ ಆತನ‌ ಮೊಬೈಲ್ ಗುಂಜೂರಿನಲ್ಲಿ ಸಿಕ್ಕಿತ್ತು . ಸದ್ಯ ಗೂಗಲ್ ಕಚೇರಿಯ ಮೊರೆ ಹೋಗಲಿರುವ ಸಿಐಡಿ ನಂತರದ ತನಿಖೆ ಯಾವ ರೀತಿ ನಡೆಸಲಿದೆ ಎಂದು ಕಾದು ನೋಡಬೇಕಿದೆ .