ಪೈಲ್ವಾನ ಚಿತ್ರಕ್ಕೂ ಶಂಕರ್ ನಾಗ್ ಗೂ ನಂಟಿದ್ಯಾ? – ಚಿತ್ರದಲ್ಲಿ ಅಂತದ್ದೇನಿದೆ ಗೊತ್ತಾ?!

ಸ್ಯಾಂಡಲ್​ವುಡ್​ನ ಸ್ಟಾರ್​ ನಟರು ತಮ್ಮ ಸಿನಿಮಾಗಳಲ್ಲಿ ಹಿರಿಯ ನಟರ ಅಭಿಮಾನಿಯಾಗಿ ಕಾಣಿಸಿಕೊಳ್ಳುವುದು ಹೊಸ ಟ್ರೆಂಡ್​​. ಇದಕ್ಕೆ ಸಾಕಷ್ಟು ಎಕ್ಸಾಂಪಲ್​ ಸಿಗುತ್ತೆ. ಮಿಸ್ಟರ್​ ಆ್ಯಂಡ್​ ಮಿಸಸ್​​ ರಾಮಾಚಾರಿ ಸಿನಿಮಾದಲ್ಲಿ ಯಶ್​ ವಿಷ್ಣುವರ್ಧನ್​ ಫ್ಯಾನ್​ ಆಗಿ ಕಾಣಿಸಿಕೊಂಡಿದ್ರು.

ಸೂಪರ್​ ಹಿಟ್​ ಆಗಿದ್ದ ಮಿಸ್ಟರ್​ ಆ್ಯಂಡ್​ ಮಿಸಸ್​​ ರಾಮಾಚಾರಿ ಚಿತ್ರದಲ್ಲಿ ವಿಷ್ಣು ನಟನೆಯ ನಾಗರಹಾವು ಚಿತ್ರವೂ ಮುಖ್ಯ ಪಾತ್ರ ವಹಿಸಿತ್ತು. ಈ ಸಿನಿಮಾ ಹಿಟ್​ ಆಗೋದಕ್ಕೆ ವಿಷ್ಣುವರ್ಧನ್​ ಕೂಡ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ. ಅಂದಹಾಗೆ ಈಗ ಈ ವಿಚಾರಗಳನ್ನೆಲ್ಲಾ ನೆನಪಿಸಿಕೊಳ್ಳೋದಕ್ಕೆ ಒಂದು ರೀಸನ್​ ಇದೆ. ಅದೇನಂದ್ರೆ ಕಿಚ್ಚ ಸುದೀಪ್ ಶಂಕರ್ ನಾಗ್ ಫ್ಯಾನ್ ಆದ್ರಾ? ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಇಂಥದೊಂದು ಸುದ್ದಿ ಕೇಳಿ ಬರಲು ಕಾರಣವೂ ಇದೆ. ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಈಗಾಗ್ಲೇ ಶುರುವಾಗಿದೆ .ಚಿತ್ರದ ವರ್ಕಿಂಗ್ ಸ್ಟೈಲ್ ಅನ್ನು ಸುದೀಪ್ ತಮ್ಮ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ . ಕಿಚ್ಚ ಐದು ಪೋಟೋಗಳನ್ನ ಕೊಲಾಜ್ ಮಾಡಿ ಅಪ್ಲೋಡ್ ಮಾಡಿದ್ದು, ಆ ಫೋಟೋದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಬಳಗ ಎಂಬ ಬೋರ್ಡ್ ಇರುವ ಕಾಲೋನಿಯ ಫೋಟೋ ಕೂಡ ಇದೆ .ಅದನ್ನ ನೋಡಿರುವ ಅಭಿಮಾನಿಗಳು ಮತ್ತು ಗಾಂಧಿನಗರದ ಮಂದಿಗೆ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ.

ಈಗಾಗಲೇ ಸುದೀಪ್ ವಿಷ್ಣು ಅಭಿಮಾನಿಯಾಗಿ ‘ವಿಷ್ಣುವರ್ಧನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಆದ್ದರಿಂದ ಈ ಚಿತ್ರದಲ್ಲಿ ಶಂಕರ್ ನಾಗ್ ಅಭಿಮಾನಿಯಾಗಿ ಕಾಣಿಸಿಕೊಳ್ಳುತ್ತಾರಾ ಎಂದು ಕುತೂಹಲ ಮೂಡಿದೆ. ಸದ್ಯ ಶಂಕರ್ ನಾಗ್ ಅವರ ಹೆಸರಿರುವ ಪೋಟೋ ನೋಡಿರುವ ಕಿಚ್ಚನ ಫ್ಯಾನ್ಸ್ ಸಖತ್ ಖುಷಿ ಆಗಿದ್ದಾರೆ. ಯಾಕೆಂದರೆ ಶಂಕರ್​ ನಾಗ್​ ಅನ್ನುವ ಹೆಸರಿಗೇ ಒಂದು ಶಕ್ತಿ ಇದೆ. ಗತಿಸಿ 25 ವರ್ಷ ಕಳೆದರೂ ಆಟೋ ರಾಜನನ್ನು ಮರೆಯೋದಕ್ಕೆ ಕನ್ನಡದ ಜನತೆಗೆ ಸಾಧ್ಯವಾಗಲಿಲ್ಲ. ಇವತ್ತಿಗೂ ಆಟೋ ಮುಂದೆ ಶಂಕರ್​ ನಾಗ್​ ಹೆಸರು ಕಾಣಿಸುತ್ತೆ. ಇವತ್ತಿಗೂ ಅಸಖ್ಯಾಂತ ಅಭಿಮಾನಿಗಳಿದ್ದಾರೆ. ಹೀಗಾಗಿ ಇಂಥ ನಟನ ಅಭಿಮಾನಿಯಾಗಿ ಕಿಚ್ಚ ಕಾಣಿಸಿಕೊಳ್ತಾರ ಅನ್ನೋ ಎಕ್ಸೆಟೈಮೆಂಟ್​ ಅಭಿಮಾನಿಗಳಲ್ಲಿ ಇದೆ. ದ ಚಿತ್ರೀಕರಣದ ವೇಳೆಯಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಪೈಲ್ವಾನ್ ಚಿತ್ರತಂಡವೇ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಅಂದಹಾಗೆ ಹೆಬ್ಬುಲಿ ಕೃಷ್ಣ ಪೈಲ್ವಾನ್ ಸಿನಿಮಾವನ್ನ ನಿರ್ದೇಶನ ಮಾಡ್ತಿದ್ದು, ಕಿಚ್ಚ ಪೈಲ್ವಾನ್​ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಕಿಚ್ಚ ಈಗಾಗ್ಲೇ ಈ ಪಾತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಚಿತ್ರದಲ್ಲಿ ಸುನೀಲ್ ಶೆಟ್ಟಿ ಇದೇ ಮೊದಲ ಬಾರಿಗೆ ಕಿಚ್ಚನ ಜತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ .