ವಿಶ್ವದಲ್ಲಿ ನಿಲ್ಲದ ಧರ್ಮಯುದ್ಧ! ನ್ಯೂಜಿಲೆಂಡ್ ಮಸೀದಿಯಲ್ಲಿ ನಡೆದ ಬ್ಲ್ಯಾಸ್ಟ್ ಗೆ ಶ್ರೀಲಂಕಾ ಬ್ಲ್ಯಾಸ್ಟ್ ಉತ್ತರ! ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಉಗ್ರರು!!

ಈಸ್ಟರ್ ದಿನದಂದು ನಡೆದ ಶ್ರೀಲಂಕಾದ ವಿವಿಧೆಡೆ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣ ಇಸ್ಲಾಮಿಕ್ ಸ್ಟೇಟ್ ಉಗ್ರರು ಎಂಬುದು ಉಗ್ರ ಸಂಘಟನೆಯ ಎಎಂಎಕ್ಯೂ ಸುದ್ದಿ ವಾಹಿನಿಯ ಮೂಲಕ ಮಂಗಳವಾರ ತಿಳಿದುಬಂದಿದೆ.

ad

ಶ್ರೀಲಂಕಾದಲ್ಲಿ ಭಾನುವಾರದಂದು ನಡೆದ 8 ಸ್ಫೋಟಗಳಲ್ಲಿ 321ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಶ್ರೀಲಂಕಾದ ಬಾಂಬ್ ಸ್ಪೋಟ ಕುರಿತು ಮಾತನಾಡಿದ ಶ್ರೀಲಂಕಾದ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ತಮಿಳು ಸಂಘಟನೆ ನ್ಯೂಜಿಲೆಂಡ್ ನಲ್ಲಿ ಮಸೀದಿಗಳ ಮೇಲೆ ಇತ್ತೀಚೆಗೆ ದಾಳಿನಡೆಸಿದ್ದರು. ಅದರ ಪ್ರತೀಕಾರವನ್ನು ತೀರಿಸಿಕೊಳ್ಳಲು ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆಗಳು ಕೊಲಂಬೋ, ನೆಗೊಂಬೋದಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಬಾಂಬ್ ಸ್ಫೋಟ ನಡೆಸಲಾಗಿದೆ. ಎಂದರು.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು 50 ಮಂದಿ ಸಾವಿಗೆ ಕಾರಣವಾಗಿದ್ದ ಈ ದುರ್ಘಟನೆಯ ಸೇಡನ್ನು ತೀರಿಸಿಕೊಳ್ಳುವುದಾಗಿ ಹೇಳಿದ್ದನ್ನು ಇಲ್ಲಿ ಕಾಣಬಹುದು. ಟೆಲಿಗ್ರಾಮ್ ಆಪ್ಲಕೇಷನ್ ನ ಅನೇಕ ಗ್ರೂಪ್ ಗಳಲ್ಲಿ ಉಗ್ರ ಸಂಘಟನೆಯ ಮೂವರು ಕಾರ್ಯಕರ್ತರ ಪೈಕಿ ಒಬ್ಬನ ಫೋಟೋ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಬು ಹಸನ್ ಅಲ್ ಮುಜಹಿರ್ ಬಿಟ್ಟಿದ್ದ 44 ನಿಮಿಷದ ಆಡಿಯೋದಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ನಡೆದಿರುವ ಅಭಿಯಾನ ಅಥವಾ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುವುದು, ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ಧ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ, ಸದ್ಯದಲ್ಲೇ ನ್ಯೂಜಿಲೆಂಡ್ ನ ಎರಡು ಮಸೀದಿ ಮೇಲಿನ ದಾಳಿಯ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದು ಆಡಿಯೋದಲ್ಲಿ ಇದೆ.

ಸೋಮವಾರದಂದು ಟೆಲಿಗ್ರಾಂ ಅಪ್ಲಿಕೇಷನ್ ನಲ್ಲಿ ಕೊಲಂಬೋ ದಾಳಿಗೆ ಸಂಬಂಧಿಸಿದ ಮೂವರು ಆತ್ಮಾಹುತಿ ದಾಳಿಕೋರರ ವಿಡಿಯೋ ಎಲ್ಲೆಡೆ ಹರಿದಾಡುತ್ತಿತ್ತು. ಅಬು ಉಬೈದಾ, ಅಬು ಮುಖ್ತಾರ್ ಹಾಗೂ ಅಬು ಬರಾ ಅವರು ಚರ್ಚ್ ಪ್ರವೇಶಿಸಿ, ಸ್ಫೋಟಿಸುವ ಚಿತ್ರ, ವಿಡಿಯೋ ಇದರಲ್ಲಿತ್ತು. ಆದರೆ ಇಲ್ಲಿಯವರೆಗೂ ಸಹ ಯಾವುದೇ ಉಗ್ರ ಸಂಘಟನೆಗಳು ಈಸ್ಟರ್ ದಿನದ ದಾಳಿ ಕುರಿತು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಸ್ಥಳೀಯ ಇಸ್ಲಾಮಿಕ್ ಸಂಘಟನೆಗಳಿಗೆ ವಿದೇಶಿ ಉಗ್ರ ಸಂಘಟನೆಯಿಂದ ಸೂಚನೆ ನೀಡಲಾಗಿತ್ತು ಎಂಬ ವರದಿ ಬಂದಿದೆ.

ತೌಹಿದ್ ಎಂಬ ಪದ ಎಲ್ಲಾ ಸಂಘಟನೆಗಳಲ್ಲೂ ಸಮಾನವಾಗಿ ಬಳಕೆಯಲ್ಲಿರುವುದರಿಂದ ಎಲ್ಲರಲ್ಲಿಯೂ ಗೊಂದಲ, ಅನುಮಾನ ಮೂಡುವುದು ಸಹಜ . ಆದರೆ ಟಿಎನ್ಟಿಜೆ ಇಲ್ಲಿಯವರೆಗೂ ಯಾವುದೇ ಕಾರಣಕ್ಕೂ ಉಗ್ರವಾದವನ್ನು ಒಪ್ಪುವುದಿಲ್ಲ ಹಾಗೂ ಬೆಂಬಲಿಸುವುದಿಲ್ಲ