ಕನಕಪುರದ ಬಂಡೆ ನಾನು, ಬಂಡೆಗೆ ತಲೆ ಚಚ್ಚಿದ್ರೆ ತಲೆ ಒಡೆಯುತ್ತೆ : ಸುಳ್ಸುದ್ದಿ ಮಾಧ್ಯಮಗಳಿಗೆ ಡಿ ಕೆ ಶಿವಕುಮಾರ್ ಎಚ್ಚರಿಕೆ!!

ಐಟಿ ಇಲಾಖೆಯವರು ವಿಚಾರಣೆಗೆ ಕರೆದ್ರು ಎಂಬ ನೆಪವನ್ನು ಇಟ್ಟುಕೊಂಡು ಕೆಲ ಮಾಧ್ಯಮ ಸಂಸ್ಥೆಗಳು ಅಪಪ್ರಚಾರ ಶುರುವಿಟ್ಟುಕೊಂಡಿದೆ. ಇದನ್ನು ಸಹಿಸಲು ಸಾದ್ಯವಿಲ್ಲ ಎಂದು ಡಿ ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ಸಿಬಿಐ, ಇಡಿ ಅಂತೆಲ್ಲಾ ಇಲ್ಲ ಸಲ್ಲದ ಸುದ್ದಿ ಹರಡ್ತಿದ್ದಾರೆ. ನಾನು ಕನಕಪುರದ ಬಂಡೆ. ಬಂಡೆಗೆ ತಲೆ ಚಚ್ಚಿದ್ರೆ ತಲೆ ಒಡೆದು ಹೋಗುತ್ತೆ. ಕೆಲವು ಸಂಸ್ಥೆಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಡಿ ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರ ನನ್ನ ದೂರವಾಣಿ ಕರೆಯನ್ನು ಕದ್ದಾಲಿಕೆ ಮಾಡುತ್ತಿದೆ. ನಿತ್ಯ ನನ್ನನ್ನು ಫಾಲೋ ಮಾಡುತ್ತಿದೆ. ಇದಕ್ಕೆಲ್ಲಾ ನಾನು ಹೆದರಲ್ಲ ಎಂದು ಡಿ ಕೆ ಶಿವಕುಮಾರ್ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.