ಕೈ ಶಾಸಕ ರಘು ಆಚಾರ್ ಗೆ ಅಚಾನಕ್ ಶಾಕ್ !! ಐಟಿ ದಾಳಿಗೆ ತತ್ತರಿಸಿದ ಕಾಂಗ್ರೆಸ್ !!

ಕಾಂಗ್ರೆಸ್​ ಎಮ್​ಎಲ್​ಸಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಪ್ತ ಎಂಎಲ್​ಸಿ ರಘು ಆಚಾರ್​ಗೆ ಐಟಿ ಶಾಕ್​ ನೀಡಿದ್ದು, ರಘು ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ನವದೆಹಲಿಯಿಂದ ಬಂದಿರುವ ಆದಾಯ ತೆರಿಗೆ ಅಧಿಕಾರಿಗಳು ರಘು ಆಚಾರ್​ ಸೇರಿರುವ ಸರ್ಜಾಪುರ ರಸ್ತೆಯ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನು ದಾಳಿ ವೇಳೆ ಕಾಂಗ್ರೆಸ್​ ಎಂಎಲ್​ಸಿ ರಘು ಆಚಾರ್ ಮನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿದ್ದು, ಅವೆಲ್ಲವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಮ್​ಎಲ್​ಸಿ ರಘು ಹಲವು ಸ್ನೇಹಿತರೊಂದಿಗೆ ಉದ್ಯಮದಲ್ಲಿ ಪಾಲುದಾರಿಕೆಯಲ್ಲಿ ತೊಡಗಿದ್ದು, ಆ ಎಲ್ಲ ಸ್ನೇಹಿತರಿಗೂ ಈಗ ಐಟಿ ದಾಳಿಯ ಭಯ ಎದುರಾಗಿದೆ.

ಕಳೆದ ಒಂದು ತಿಂಗಳಿನಿಂದ ಎಮ್​ಎಲ್​ಸಿ ರಘು ಆಚಾರ ದೂರವಾಣಿ ಹಾಗೂ ಆತನ ಚಲನ-ವಲನದ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ. ರಘು ಆಚಾರ್​, ಡಾ.ಪರಮೇಶ್ವರ್​ ಗೆ ಆಪ್ತರಾಗಿದ್ದು, ಚುನಾವಣೆಗೆ ಅಪಾರ ಪ್ರಮಾಣ ಹಣ ಸಂಗ್ರಹಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಸಂಶಯ ವ್ಯಕ್ತವಾಗಿದೆ.